Channel​ Debate ವೇಳೆ ಹೊಡೆದಾಡಿಕೊಂಡ ಧಾರ್ಮಿಕ ಮುಖಂಡರು; Video Viral

Fight
Published on

ನವದೆಹಲಿ: ನಾವು ನೋಡಿರುವಂತೆ ಸಾಮಾನ್ಯವಾಗಿ ಯಾವುದಾದರು ಒಂದು ವಿಚಾರ ತೀವ್ರ ಸ್ವರೂಪ ಪಡೆದುಕೊಂಡಾಗ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ಯಾನಲ್​ ಡಿಬೇಟ್​ (Panel Debate) ಮಾಡುವುದನ್ನು ನೋಡಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಕೆಲವೊಮ್ಮೆ ಮಾತಿನ ಚಕಮಕಿಯಾಗಿ ಲೈವ್​ನಲ್ಲೇ ಕೈ ಕೈ ಮಿಲಾಯಿಸಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಖ್ಯಾತ ಸುದ್ದಿ ವಾಹಿನಿಯ ಪ್ಯಾನೆಲ್​ ಡಿಬೇಟ್​ನಲ್ಲಿ ನಡೆದಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಖಾಸಗಿ ಸುದ್ದಿ ವಾಹಿನಿಯ ತಾಲ್ ತೊಕ್ ಕೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಭೇಟಿ ಕುರಿತು ಪ್ಯಾನೆಲ್​ ಡಿಬೇಟ್​ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಭೇಟಿ ಕುರಿತು ಒಬ್ಬ ಹಿಂದೂ ಮುಖಂಡ ಮತ್ತು ಒಬ್ಬ ಮುಸ್ಲಿಂ ಮುಖಂಡ  ಪ್ಯಾನಲ್​ ಡಿಬೇಟ್​ನಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಉಭಯ ಮುಖಂಡರ ನಡುವೆ ಮಾತಿನ ಚಕಮಕಿಯಾಗಿದ್ದು, ಚರ್ಚೆಯ ಮಧ್ಯೆದಲ್ಲೇ ಆಚಾರ್ಯ ವಿಕ್ರಮಾದಿತ್ಯ ಅವರು ಕೋಪ ತಡೆಯಲಾರದೆ ಮುಸ್ಲಿಂ ಮುಖಂಡ ಹಾಜಿಕ್ ಖಾನ್ ಅವರ ಕತ್ತಿನ ಪಟ್ಟಿಗೆ ಕೈ ಹಾಕಿ ಕೆನ್ನೆಗೆ ಬಾರಿಸಿದ್ದಾರೆ. ಈ ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. The Analyzer (News Updates) ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net