ಸದ್ದಿಲದೆ Engagement ಮಾಡಿಕೊಂಡ BiggBoss​ ವಿನ್ನರ್ ಮಂಜು ಪಾವಗಡ; ಮದುವೆ ಯವಾಗ ಗೊತ್ತಾ?

Manju Engagement
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ (BiggBoss)​ ಸೀಸನ್​​-8ರ ವಿಜೇತ, ಹಾಸ್ಯ ಕಲಾವಿದ ಮಂಜು ಪಾವಗಡ ಸದ್ದಿಲ್ಲದೆ ಎಂಗೇಜ್​ಮೆಂಟ್​ (Engagement) ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ಧಾರೆ.

ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ (Engagement) ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಹಾಗೂ ಸಲೆಬ್ರಿಟಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.

ನಂದಿನಿ ಎಂಬುವವರ ಜೊತೆ ಮಂಜು ನಿಶ್ಚಿತಾರ್ಥ ಮಾಡಿಕೊಂಡಿಡ್ಡು, ಗುರು-ಹಿರಿಯರು ನಿಶ್ಚಯಿಸಿರುವ ಸಂಬಂಧ ಇದಾಗಿದೆ. ನವೆಂಬರ್​ 13-14ರಂದು ಪಾವಗಡದಲ್ಲಿ ಮದುವೆ ನಡೆಯಲಿದೆ. ಮಂಜು ಪಾವಗಡ ಅವರ ನಿಶ್ಚಿತಾರ್ಥಕ್ಕೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಆಗಮಿಸಿದ್ದರು. ಮದುವೆಗೆ ಅವರು ಚಿತ್ರರಂಗದವರಿಗೆ ಆಮಂತ್ರಣ ನೀಡುವ ಸಾಧ್ಯತೆ ಇದೆ.

ಗಿಚ್ಚಿ ಗಿಲಿಗಿಲಿ, ಅಂತರಪಟ, ಭಾಗ್ಯಲಕ್ಷ್ಮೀ ಸೇರಿದಂತೆ ಹಲವರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಮಂಜು ಪಾವಗಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮದುವೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ಮಂಜು ಅವರೇ ರಿವೀಲ್ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net