T20 World Cup| ನ್ಯೂಜಿಲೆಂಡ್​ ಎದುರು ಹೀನಾಯ ಸೋಲು; Team India ನಾಯಕಿ ಹರ್ಮಾನ್​ಪ್ರೀತ್​ ಹೇಳಿದ್ದಿಷ್ಟು

harmanpreet kaur
Published on

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ನಡುವೆ ನಡೆದ ಮಹಿಳಾ ಟಿ20 ವಿಶ್ವಕಪ್​ನ (T20 World Cup) ನಾಲ್ಕನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ವನಿತೆಯರು ಹೀನಾಯ ಸೋಲು ಕಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್​ ತಂಡವು ನಾಯಕಿ ಸೋಫಿ ಡಿವೈನ್​ (57 ರನ್​, 36 ಎಸೆತ, 7 ಬೌಂಡರಿ) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 160 ರನ್​ ಗಳಿಸಿತು. ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ನ್ಯೂಜಿಲೆಂಡ್​ ಬೌಲರ್​ಗಳು ಎದುರಾಳಿ ತಂಡವನ್ನು 102 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ಗೆಲುವಿನ ನಗೆ ಬೀರಿದರು.

ಇನ್ನೂ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿರುವ ನಾಯಕ ಹರ್ಮಾನ್​ಪ್ರೀತ್​ ಕೌರ್​, ನಾವು ಹಲವು ಬಾರಿ 160-170 ರನ್ ಚೇಸ್ ಮಾಡಿದ್ದೇವೆ. ಈ ಬಾರಿಯೂ ಕೂಡ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ನಾವು ನಿರಂತರವಾಗಿ ವಿಕೆಟ್​​ಗಳನ್ನು ಕೆಳದುಕೊಂಡಿದ್ದೆ ನಮ್ಮ ಸೋಲಿಗೆ ಕಾರಣವಾಯ್ತು. ನಮ್ಮ ತಂಡ ಉತ್ತಮವಾ ಸಾಮರ್ಥ್ಯವನ್ನು ಹೊಂದಿದ್ದು, ನಿರೀಕ್ಷಿತ ಆರಂಭ ನಮಗೆ ಸಿಕ್ಕಿಲ್ಲ. ಆದರೆ, ನಾವು ಮುಂದಿನ ಪಂದ್ಯಗಳ ಬಗ್ಗೆ ಯೋಚಿಸಬೇಕಿದೆ.

ನಾವು ಅವಕಾಶಗಳನ್ನು ಸೃಷ್ಟಿಸಿದ್ದೇವೆ ಆದರೆ, ಆ ಅವಕಾಶಗಳನ್ನು ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಎದುರಾಳಿಗಳು ನಮಗಿಂತ ಚೆನ್ನಾಗಿ ಆಡಿದರು. ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ, ಆದ್ದರಿಂದ ನಾವು ಮುಂದೆ ಹೋಗಲು ಕಲಿಯುತ್ತೇವೆ ಎಂದು ಟೀಮ್​ ಇಂಡಿಯಾ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net