ಮದುವೆಯಾದ ಎರಡೇ ದಿನದಲ್ಲಿ ನವ ದಂಪತಿ ಶವವಾಗಿ ಪತ್ತೆ!: ಅಸಲಿಗೆ ನಡೆದಿದ್ದೇನು..? | Couple

dk - 2025-06-15T223445.833
Published on

Couple: ಮದುವೆಯಾದ ಎರಡೇ ದಿನದಲ್ಲಿ ನವ ವಿವಾಹಿತ ದಂಪತಿಗಳು ಶವವಾಗಿ ಪತ್ತೆಯಾದ ಘಟನೆ ಬಿಹಾರದ ವೈಶಾಲಿಯಲ್ಲಿ ಶನಿವಾರ ನಡೆದಿದೆ.

ನವ ದಂಪತಿಗಳು ತಮ್ಮ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವಾಡಾ ಕಲಾನ್ ಗ್ರಾಮದ 25ರ ಪಪ್ಪು ಕುಮಾರ್ ಹಾಗೂ ಪ್ರಿಯಾ ಗುಪ್ತಾ ಮೃತರು ಎಂದು ಗುರುತಿಸಲಾಗಿದೆ. ಈ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಅಸಲಿಗೆ ನಡೆದ ಘಟನೆ ಏನು..?

ಪಪ್ಪು ಕುಮಾರ್ ಹಾಗೂ ಪ್ರಿಯಾ ಗುಪ್ತಾ ಪ್ರೀತಿಸಿ ಮದುವೆಯಾಗಿದ್ದರು. ಅವರಿಬ್ಬರೂ ಜೂನ್ 12 ರಂದು ವೈಶಾಲಿಯ ಮಹಾನಾರ್ ಬ್ಲಾಕ್‌ನಲ್ಲಿರುವ ಶಿವ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಹುಡುಗಿಯ ಕುಟುಂಬ ಪೊಲೀಸರಿಗೆ ದೂರು ನೀಡುತ್ತದೆ ಎಂದು ಪಪ್ಪು ಭಯಪಟ್ಟಿದ್ದಾನೆ. ಆದ್ದರಿಂದ ಇಬ್ಬರು ಪ್ರೇಮಿಗಳು ತಮ್ಮ ಸ್ನೇಹಿತ ಮಿಥಿಲೇಶ್ ಮನೆಗೆ ಹೋಗಿದ್ದಾರೆ.

ಸ್ನೇಹಿತ ಮಿಥಿಲೇಶ್ ಮನೆಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಗಂಡ-ಹೆಂಡತಿ ಇಬ್ಬರು ಇದ್ದಾರೆಂದು ಮಿಥಿಲೇಶ್​ ಹೊರಗೆಡೆ ಮಲಗಿದ್ದಾನೆ. ಆದರೆ, ಬೆಳಗ್ಗೆ ಎದ್ದು ನೋಡಿದ್ರೆ ಕೊಠಡಿಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net