ಪತ್ನಿಯ ಮಾತಿಗೆ ಕ್ಯಾರೇ ಅನ್ನದೆ ಆತ ಮಾಂಸದಡುಗೆ ಮಾಡಿಯೇ ಬಿಟ್ಟ... ಮುಂದೇನಾಯ್ತು ನೋಡಿ...!

suicide. jpg
Published on

ಲಖೀಮ್​ಪುರ:ಮಾಂಸದಡುಗೆ ಮಾಡುವ ವಿಚಾರದಲ್ಲಿ ನವದಂಪತಿ ಮಧ್ಯೆ ವಾಗ್ವಾದ ಶುರುವಾಗಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಸಾನಗರ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಗುರು ದಯಾಳ್ (22) ರೇಷ್ಮಾ (19) ಅವರ ವಿವಾಹ ಜೂನ್ 12 ರಂದು ನಡೆದಿತ್ತು.

ಸಸ್ಯಾಹಾರಿಯಾಗಿದ್ದ ರೇಷ್ಮಾ, ಪತಿ ಅಡುಗೆಮನೆಯಲ್ಲಿ ಮಾಂಸ ಬೇಯಿಸುವುದಕ್ಕೆ ಆಕ್ಷೇಪಿಸಿ, ಅಡುಗೆ ಮನೆಯಾಚೆ ಮಾಂಸದಡುಗೆ ಮಾಡಲು ತಿಳಿಸಿದ್ದಾಳೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆತ ಅಡುಗೆ ಮನೆಯಲ್ಲೇ ಮಾಂಸದಡುಗೆ ಮಾಡಲು ತಾಯಿಗೆ ತಿಳಿಸುತ್ತಾನೆ.

ಇದೇ ವಿಷಯವಾಗಿ ದಂಪತಿಯ ಮಧ್ಯೆ ವಾಗ್ವಾದ ತಾರಕಕ್ಕೇರಿ ರಾತ್ರಿ ಇಬ್ಬರೂ ವಿಷಕಾರಿ ಪದಾರ್ಥ ಸೇವಿಸಿದ್ದಾರೆಂದು ತಿಳಿದುಬಂದಿದೆ.

ಗುರು ದಯಾಳ್ ಅವರ ತಂದೆ ಶಿವನಾಥ್ ವಿಷ ಸೇವಿಸಿದ ಆ ನವದಂಪತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಡುಗೆಮನೆಯಲ್ಲಿ ಮಾಂಸದಡುಗೆ ಮಾಡಿದ ನಂತರ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆಯ ವೇಳೆ ಪತ್ನಿ ಸಾವನ್ನಪ್ಪಿದ್ದು, ಪತಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಪ್ರಕರಣದ ಕುರಿತು ಇನ್ನೂ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಇಸಾನಗರ ಪೊಲೀಸ್ ಠಾಣಾಧಿಕಾರಿ ಸುನೀಲ್ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net