More

    ಕೋವಿಡ್-19: ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ; ಭಾರತದ ಸಾಧನೆ

    ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದಲ್ಲಿ ಈವರೆಗೆ ಪರೀಕ್ಷಿಸಿದ ಮಾದರಿಗಳ ಸಂಖ್ಯೆ 73 ಲಕ್ಷ ದಾಟಿದೆ. ವಾಸ್ತವವಾಗಿ, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಭಾಗವಾಗಿ, ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಯಿತು, ಇದು ಇಲ್ಲಿಯವರೆಗಿನ ಅತಿ ಹೆಚ್ಚು ಪ್ರಮಾಣದ ಪರೀಕ್ಷೆಯಾಗಿದೆ.
    ನಿನ್ನೆ 2,15,195 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 73,52,911 ಆಗಿದೆ. ಸರ್ಕಾರಿ ಪ್ರಯೋಗಾಲಯಗಳಲ್ಲಿ 1,71,587 ಮಾದರಿಗಳನ್ನು ಪರೀಕ್ಷಿಸಿದರೆ, 43,608 ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ಖಾಸಗಿ ಲ್ಯಾಬ್‌ಗಳು ಸಹ ಈ ಪ್ರಮಾಣದೊಂದಿಗೆ ಒಂದು ದಿನದಲ್ಲಿ ಗರಿಷ್ಠ ಮಟ್ಟವನ್ನು ತಲುಪಿವೆ.

    ಇದನ್ನೂ ಓದಿ: ಗುಡ್ ನ್ಯೂಸ್…! ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ ಈ ರಾಜ್ಯ

    ಮಾದರಿ ಪರೀಕ್ಷೆಗಳ ಹೆಚ್ಚಳದ ಹೊರತಾಗಿ, ದೇಶಾದ್ಯಂತ ಕೋವಿಡ್-19 ಪರೀಕ್ಷೆಯ ಪ್ರಯೋಗಾಲಯಗಳನ್ನು ಹೆಚ್ಚಿಸಲು ಭಾರತಕ್ಕೆ ಸಾಧ್ಯವಾಗಿದೆ. ಭಾರತವು ಈಗ ದೇಶಾದ್ಯಂತ ಸರ್ಕಾರಿ ವಲಯದಲ್ಲಿ 730 ಮತ್ತು ಖಾಸಗಿ ವಲಯದಲ್ಲಿ 270 ಲ್ಯಾಬ್‌ಗಳು ಸೇರಿ 1000 ಲ್ಯಾಬ್‌ಗಳನ್ನು ಹೊಂದಿದೆ.
    • ರಿಯಲ್-ಟೈಮ್ ಆರ್​ಟಿ ಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 557 (ಸರ್ಕಾರ: 359 + ಖಾಸಗಿ: 198).

    ಇದನ್ನೂ ಓದಿ: ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

    • ಟ್ರೂನ್ಯಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 363 (ಸರ್ಕಾರ: 343 + ಖಾಸಗಿ: 20).
    • ಸಿಬಿಎನ್‌ಎಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 80 (ಸರ್ಕಾರ: 28 + ಖಾಸಗಿ: 52).
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಪ್ರತಿದಿನ ಚೇತರಿಸಿಕೊಳ್ಳುತ್ತಿರುವ ಕೋವಿಡ್ -19 ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 10,495 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 2,58,684 ರೋಗಿಗಳನ್ನು ಗುಣಪಡಿಸಲಾಗಿದೆ. ಕೋವಿಡ್ -19 ರೋಗಿಗಳಲ್ಲಿ ಚೇತರಿಕೆ ಪ್ರಮಾಣ 56.71%. ಪ್ರಸ್ತುತ 1,83,022 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.

    ನೆಚ್ಚಿನ ಟಿವಿ ಧಾರಾವಾಹಿ ನೋಡಲು ಶುರುವಾದ ವಾಗ್ವಾದ ತಾರಕಕ್ಕೇರಿತು, ಮುಂದೇನಾಯ್ತು ನೋಡಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts