ಮದ್ವೆಯಾದ ಹತ್ತೇ ದಿನದಲ್ಲಿ ಗಂಡನ ಕಳೆದುಕೊಂಡ ನವವಿವಾಹಿತೆಗೆ ಮತ್ತೊಂದು ಆಘಾತ..!

UP Girl
Published on

ಫಿರೋಜಾಬಾದ್​: ಮದುವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಮೃತಪಟ್ಟಿದ್ದು, ಇದರ ಬೆನ್ನಲ್ಲೇ ನವವಿವಾಹಿತೆ ಸೇರಿದಂತೆ ಒಂದೇ ಕುಟುಂಬದ 9 ಮಂದಿಗೆ ಮಹಾಮಾರಿ ಕರೊನಾ ಸೋಂಕು ತಗುಲಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ.

ಮೃತನ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ವೈದ್ಯಾಧಿಕಾರಿ ಡಾ. ನಿತಾ ಕುಲಶ್ರೇಷ್ಠ, ಸುಮಾರು 10 ದಿನಗಳ ಹಿಂದಷ್ಟೇ ಮೃತನ ಮದುವೆಯಾಗಿತ್ತು. ಅದರ ಬೆನ್ನಲ್ಲೇ ಆತನ ಅನಾರೋಗ್ಯಕ್ಕೀಡಾಗಿದ್ದ. ಡಿಸೆಂಬರ್​ 4ರಂದು ಕೊನೆಯುಸಿರೆಳೆದಿದ್ದಾನೆ. ಆದರೆ, ಆತ ಕರೊನಾ ಪರೀಕ್ಷೆಗೆ ಒಳಗಾಗಿರಲಿಲ್ಲ. ಹೀಗಾಗಿ ಆತನ ವೈರಸ್​ನಿಂದಲೇ ಮೃತಪಟ್ಟಿದ್ದಾನೆಂದು ಹೇಳಲು ಸಾಧ್ಯವಿಲ್ಲ. ಆದರೂ ಆತನ ಕುಟುಂಬ ಸದಸ್ಯರಿಗೆ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆ ಮಾಡಿದಾಗ ನವವಿವಾಹಿತೆ ಸೇರಿದಂತೆ ಕುಟುಂಬದ 9 ಮಂದಿ ಸೋಂಕು ತಗುಲಿರುವುದು ಖಚಿತವಾಗಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಗ್ರಾಮದಲ್ಲಿ ವೈದ್ಯಕೀಯ ಶಿಬಿರ ಸ್ಥಾಪಿಸಲಾಗಿದ್ದು, ಇತರೆ ಮಂದಿಯನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ನಿತಾ ಕುಲಶ್ರೇಷ್ಠ ಹೇಳಿದರು. ಫಿರೋಜಾಬಾದ್​ನಲ್ಲಿ ಇಲ್ಲಿಯವರೆಗೆ 3,673 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, ಸದ್ಯ 171 ಸಕ್ರೀಯ ಪ್ರಕರಣಗಳಿವೆ. 67 ಮಂದಿ ಕರೊನಾಗೆ ಬಲಿಯಾಗಿದ್ದಾರೆಂದು ನೀತಾ ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net