VIDEO| ಸ್ಕೈಡೈವಿಂಗ್ ವೇಳೆ ರೋಮಾಂಚನಕಾರಿ ಮದುವೆ.. ಈ ವಿವಾಹಕ್ಕೆ ಹೋಗೋಕೆ ಧೈರ್ಯ ಬೇಕು!

skydive
Published on

ನವದೆಹಲಿ: ಮದುವೆ ಎರಡು ಕುಟುಂಬಗಳನ್ನು ಒಟ್ಟುಗೂಡಿಸುವ ಸಮಾರಂಭವಾಗಿದೆ. ಆದರೆ ಈ ವಿಡಿಯೋದಲ್ಲಿ ನೀವು ನೋಡುತ್ತಿರುವುದು ಸಾಹಸಮಯದಿಂದ ಕೂಡಿದ ವಿಭಿನ್ನವಾದ ವಿವಾಹವಾಗಿದೆ. ಈ ಮದುವೆಯಲ್ಲಿ ವಧು-ವರರು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ. ಇದೇನು ವಿಚಿತ್ರ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ಯಾ? ಬನ್ನಿ ನಾವು ನಿಮಗೆ ಈ ಸ್ಟೋರಿ ಹೇಳುತ್ತೇವೆ...

ಇಂದಿನ ಯುವ ಪೀಳಿಗೆ ಮದುವೆಯಲ್ಲಿ ವಿಭಿನ್ನವಾಗಿರ ಬೇಕು ಎನ್ನುವ ಉದ್ದೇಶದಿಂದ ನಾನಾ ತಂತ್ರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ, ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದಾರೆ. ಎತ್ತರದ ಪರ್ವತದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ದಂಪತಿ ತಮ್ಮ ಮದುವೆಯನ್ನು ಸ್ಮರಣೀಯ, ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಈ ನವ ಜೋಡಿಯ ಹೆಸರು ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೋ ಲೆಕರ್ಸ್. ಇತ್ತೀಚೆಗಷ್ಟೇ ಇವರ ಮದುವೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಮದುವೆಯ ಅತಿಥಿಗಳು ಎತ್ತರದ ಬೆಟ್ಟದ ಮೇಲೆ ನಿಂತಿದ್ದಾರೆ. ವಧು-ವರರು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ.

ಈ ವಿಡಿಯೋಗೆ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರ ಧೈರ್ಯ ಮತ್ತು ಸಾಹಸಕ್ಕಾಗಿ ದಂಪತಿಗೆ ಅಭಿನಂದನೆಗಳು. ಅತಿಥಿಗಳಿಗೂ ಅವಿಸ್ಮರಣೀಯ ಸಂಭ್ರಮವಾಗಲಿದೆ ಎನ್ನುತ್ತಾರೆ.

ನನ್ನ ಮದುವೆಯನ್ನು ಹೀಗೇ ಮಾಡಬೇಕೆಂದಿದ್ದೇನೆ ಆದರೆ ಏನು ಮಾಡುವುದು ಧೈರ್ಯ ನನಗಿಲ್ಲ. ನವವಿವಾಹಿತರಿಗೆ ಅಭಿನಂದನೆಗಳು, ವಿಡಿಯೋ ನೋಡಿ ಭಯವಾಯಿತು ಎಂದು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net