More

    ವಿಡಿಯೋ ಗೇಮ್ ಆಡುತ್ತಿರುವ ಶ್ವಾನ; ಕಂಪ್ಯೂಟರ್ ಆಫ್ ಆದಾಗ ನಾಯಿ ಮಾಡಿದ್ದೇನು?

    ನವದೆಹಲಿ: ಫೋನ್, ಕಂಪ್ಯೂಟರ್​​, ಟಿವಿಯಲ್ಲಿ ಸೀರಿಯಸ್ಸಾಗಿ ನೋಡುತ್ತಿರುವಾಗ ಅಥವಾ ಯಾವುದೇ ಆಟ ಆಡುವಾಗ ಯಾರಾದರೂ ಅಡ್ಡಿಪಡಿಸಿದರೆ ನಮಗೆ ಕಿರಿಕಿರಿಯಾಗುತ್ತದೆ. ತಕ್ಷಣವೇ ಯಾರು ನಮಗೆ ತೊಂದರೆ ನೋಡುತ್ತಾರೆ ಅವರ ಮೇಲೆ ಮುನಿಸಿಕೊಳ್ಳುತ್ತೇವೆ. ಹೀಗೆ ಮನುಷ್ಯರಂತೆ ನಾಯಿಯೂ ಕೂಡಾ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿರುವ ವಿಡಿಯೋ ವೈರಲ್​ ಆಗಿದೆ.

     ಇದನ್ನೂ ಓದಿತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು

    ನಾಯಿಗಳು ತುಂಬಾ ಬುದ್ಧಿವಂತ ಪ್ರಾಣಿಗಳಾಗಿವೆ. ಮನುಷ್ಯರನ್ನು ತುಂಬಾ ನಂಬುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಮನುಷ್ಯರಂತೆ ಭಾವನೆಗಳನ್ನು ತೋರಿಸುತ್ತದೆ.

    ಇದನ್ನೂ ಓದಿ:  ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು

    ವಿಡಿಯೋದಲ್ಲಿ ಏನಿದೆ?: ನಾಯಿಯೊಂದು ಕೀಬೋರ್ಡ್ ಬಳಸಿ ಗಂಭೀರವಾಗಿ ವಿಡಿಯೋ ಗೇಮ್ ಆಡುತ್ತಿದೆ. ಅದರ ಮಾಲೀಕರು ಕಂಪ್ಯೂಟರ್ ಅನ್ನು ಆಫ್ ಮಾಡಿದರು. ಕೋಪಗೊಂಡ ಶ್ವಾನ ಕೀ ಬೋರ್ಡ್​​​ನ್ನು ಸಿಟ್ಟಿನಿಂದ ತಳ್ಳಿದೆ. ಅದರ ಮುಖದಲ್ಲಿ ತುಂಬ ಕೋಪ ಮತ್ತು ಹತಾಶೆ ಎದ್ದು ಕಾಣುತ್ತಿತ್ತು.

    ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಾಯಿಗೆ ತುಂಬಾ ಕೋಪ ಬಂದಂತಿದೆ’ ‘ಯಾಕೆ ಡಿಸ್ಟರ್ಬ್ ಮಾಡ್ತೀರಾ?’ ಎಂದು ಹೀಗೆ ತಮಾಷೆಯ ಎಮೋಜಿಗಳೊಂದಿಗೆ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಅದೇನೇ ಇರಲಿ, ಪ್ರಾಣಿಗಳಿಗೂ ಕೂಡಾ ಭಾವನೆ ಇರುತ್ತದೆ ಎನ್ನುವ ಈ ಶ್ವಾನದ ವಿಡಿಯೋ ನೆಟ್ಟಿಗರ ಮನ ಕದ್ದಿದೆ.

    ಕಲುಷಿತ ನೀರು ಸೇವಿಸಿ 25 ಕ್ಕೂ ಹೆಚ್ಚು ಜನ‌ ಅಸ್ವಸ್ಥ, ಮೂವರ ಆರೋಗ್ಯ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts