ಹೊಸ ವರ್ಷಾಚರಣೆ ನಿಷೇಧಾಜ್ಞೆ ನಡುವೆಯೂ ಮದ್ಯ ಮಾರಾಟಕ್ಕೆ ಸಮಯದ ಗಡುವು

liquor bar
Published on

ಕೋಲಾರ: ಮದ್ಯಪ್ರಿಯರೇ ನಿಮಗೊಂದು ಗುಡ್​ ನ್ಯೂಸ್​. ಕೋವಿಡ್​ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಟೈಟ್​ ರೂಲ್ಸ್​ ಮಾಡಿದೆಯಾದರೂ ಮದ್ಯಪ್ರಿಯರಿಗೆ ತುಸು ಸಡಿಲಗೊಳಿಸಿದೆ.

ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಮಧ್ಯರಾತ್ರಿ 1 ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬಾರ್, ವೈನ್ ಶಾಪ್​, ಕ್ಲಬ್​ಗಳು ಮಧ್ಯರಾತ್ರಿ 1 ಗಂಟೆವರೆಗೂ ತೆರೆಯಲಿದೆ. ಬೆಂಗಳೂರು ಹೊರತುಪಡಿಸಿ ಉಳಿದೆಡೆ ಮಧ್ಯರಾತ್ರಿ 12.30 ಗಂಟೆಗೆ ಬಂದ್ ಆಗಲಿದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಮಾಹಿತಿ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ 12ರಿಂದ ಶುಕ್ರವಾರ ಬೆಳಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ನಿಷೇಧಾಜ್ಞೆ ನಡುವೆಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟದಿಂದ 20 ಕೋಟಿ ರೂ. ಆದಾಯ ನಿರೀಕ್ಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net