ನಿನ್ನೆ ಭಾರಿ ಇಳಿಕೆ; ಇಂದು ಮತ್ತೆ ಆಕಾಶಕ್ಕೆ; ಅತ್ಯಧಿಕ 9,058 ಜನರಿಗೆ ಕರೊನಾ ಸೋಂಕು; 135 ಜನರ ಸಾವು

delhi- covid
Published on

ಬೆಂಗಳೂರು: ಕಳೆದೊಂದು ವಾರದಿಂದ ಏರುತ್ತಲೇ ಇದ್ದ ಕರೊನಾ ಪೀಡಿತರ ಸಂಖ್ಯೆಯಲ್ಲಿ ನಿನ್ನೆ ಭಾರಿ ಇಳಿಕೆಯಾಗಿ ನೆಮ್ಮದಿ ಮೂಡಿಸಿತ್ತು. ಆದರೆ ಇಂದು ಹೊಸ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ಈವರೆಗಿನ ಅತ್ಯಧಿಕ 9 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ ಕೂಡ 3.50 ಲಕ್ಷ ದಾಟಿದೆ.

ನಿನ್ನೆಯ ಕೋವಿಡ್​ ಸಂಖ್ಯೆ 6,495 ಆಗಿದ್ದರೆ, ಇಂದು ಕೋವಿಡ್​ಗೆ ಒಳಗಾದವರು 9,058. ಜತೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೂಡ ಕಡಿಮೆಯಾಗಿದೆ. ನಿನ್ನೆ 7,238 ಜನರು ಗುಣವಾಗಿದ್ದರೆ, ಇಂದು ಈ ಸಂಖ್ಯೆ 5,159ಕ್ಕೆ ಇಳಿದಿದೆ.

ರಾಜ್ಯದಲ್ಲಿ ಒಟ್ಟು ಕೋವಿಡ್​ ಪೀಡಿತರ ಸಂಖ್ಯೆ 3,51,481 ಆಗಿದ್ದು, ಸಕ್ರಿಯ ಕೇಸ್​ಗಳ ಸಂಖ್ಯೆ ಕೂಡ 90,999ಕ್ಕೆ ಏರಿಕೆಯಾಗಿದೆ.

ಮೃತರ ಸಂಖ್ಯೆಯೂ ಹೆಚ್ಚಾಗಿದ್ದು, ಇಂದು 135 ಜನರು ಸಾವಿಗೀಡಾಗಿದ್ದಾರೆ. ನಿನ್ನೆ ಈ ಸಂಖ್ಯೆ 113 ಆಗಿತ್ತು. ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ತಲುಪಿದೆ. ಸದ್ಯ 762 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿಯಲ್ಲಿಯೂ ಹೊಸ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಾಗಿದೆ. ನಿನ್ನೆ 1,862 ಜನರು ಸೋಂಕಿಗೆ ಒಳಗಾಗಿದ್ದರೆ, ಇಂದು ಈ ಸಂಖ್ಯೆ 2,967 ಆಗಿದೆ. ಒಟ್ಟು ಕೋವಿಡ್​ ರೋಗಿಗಳ ಸಂಖ್ಯೆ 1,32,092ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ ನಿನ್ನೆ 2,422 ಆಗಿದ್ದರೆ, ಇಂದು ಇದರಲ್ಲಿ ಭಾರಿ ಇಳಿಕೆಯಾಗಿ 1,137 ಜನರಷ್ಟೇ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 91,180 ಜನರು ಗುಣವಾಗಿದ್ದಾರೆ. ಇನ್ನು ಇಂದು 40 ಜನರು ಸಾವಿಗೀಡಾಗುವ ಮೂಲಕ 2,005 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.

ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net