More

    20 ಲಕ್ಷ ಕರೊನಾ ಕೇಸ್​ಗಳು ಒಂದೇ ತಿಂಗಳಲ್ಲಿ…! 28 ಸಾವಿರ ಸಾವು; ಭಾರತದ್ದು ಜಗತ್ತಿನಲ್ಲೇ ದಾಖಲೆ….!

    ನವದೆಹಲಿ: ಭಾರತ ಆಗಸ್ಟ್​ನಲ್ಲಿ 20 ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದು ಜಗತ್ತಿನಲ್ಲಿಯೇ ಅತ್ಯಧಿಕ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಜತೆಗೆ, ಕಳೆದ 31 ದಿನಗಳಲ್ಲಿ ದೇಶದಲ್ಲಿ 28,000 ಸಾವಿರ ಜನರು ಕೋವಿಡ್​ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ.

    ಸದ್ಯ, ಕೋವಿಡ್​ ರೋಗಿಗಳಿಗೆ ಹೋಲಿಸಿದಲ್ಲಿ ಭಾರತ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಮುಂದುವರಿದರೆ, ಒಂದನೇ ಸ್ಥಾನಕ್ಕೇರುವುದು ಖಚಿತ. ಏಕೆಂದರೆ, ಮೊದಲೆರಡು ಸ್ಥಾನದಲ್ಲಿರುವ ಅಮೆರಿಕ ಹಾಗೂ ಬ್ರೆಜಿಲ್​ನಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

    ಇದನ್ನೂ ಓದಿ; ಒಂದೇ ಹಾವು, ಒಂದೇ ತಿಂಗಳಲ್ಲಿ ಎಂಟು ಬಾರಿ ಬಾಲಕನಿಗೆ ಕಚ್ಚಿದೆ; ಹಾವಿನ ದ್ವೇಷಕ್ಕೆ ಹೊಸ ವ್ಯಾಖ್ಯಾನವೇ? 

    ಸದ್ಯ ಭಾತದಲ್ಲಿ ಸೆಪ್ಟಂಬರ್​ 1ರ ಅಂಕಿ-ಸಂಖ್ಯೆ ಪ್ರಕಾರ 36,91,166 ಜನ ಕೋವಿಡ್​ ಕಾಯಿಲೆಗೆ ತುತ್ತಾಗಿದ್ದಾರೆ. ಅದೇ ಬ್ರೆಜಿಲ್​ನಲ್ಲಿ 39 ಲಕ್ಷ ಹಾಗೂ ಅಮೆರಿಕದಲ್ಲಿ 60 ಲಕ್ಷ ಜನರು ಕರೊನಾ ಪಾಸಿಟಿವ್​ ಆಗಿದ್ದಾರೆ. ಜುಲೈ ಅಂತ್ಯಕ್ಕೆ ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ 16,38,870 ಆಗಿತ್ತು. ಅಗಸ್ಟ್​ ಅಂತ್ಯಕ್ಕೆ 36 ಲಕ್ಷ ದಾಟಿ, ಒಂದೇ ತಿಂಗಳಲ್ಲಿ 20 ಲಕ್ಷ ರೋಗಿಗಳನ್ನು ಹೊಂದಿದಂತಾಗಿದೆ.

    ಭಾರತದಲ್ಲಿ ಪ್ರತಿದಿನ ಸರಾಸರಿ ಪ್ರತಿದಿನ 64 ಸಾವಿರ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಜುಲೈ ಸರಾಸರಿಗೆ ಹೋಲಿಸಿದಲ್ಲಿ ಶೇ.84 ಹೆಚ್ಚಳ ಕಂಡಿದೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಆಗಿದೆ. ಅಮೆರಿಕದಲ್ಲಿ ಕಳೆದ ತಿಂಗಳ ಪ್ರತಿದಿನದ ಸರಾಸರಿ 47 ಸಾವಿರ ಕೇಸ್​ಗಳಾಗಿವೆ.

    ಇದನ್ನೂ ಓದಿ; ಕೋವಿಡ್​ಗೆ ಲಸಿಕೆ ಮದ್ದಲ್ಲ, ಸದ್ಯಕ್ಕೆ ಸಿಗೋದು ಇಲ್ಲ; ಪ್ರಧಾನಿಗೆ ಪತ್ರ ಬರೆದ ಆರೋಗ್ಯ ತಜ್ಞರು 

    ಆದರೆ, ಚೇತರಿಕೆ ಪ್ರಮಾಣ ಕೂಡ ಅಷ್ಟೇ ಹೆಚ್ಚಾಗಿದೆ ಎಂಬುದು ಕೊಂಚ ಆಶಾದಾಯಕ ಸಂಗತಿ. 15 ಸಾವಿರವಿದ್ದ ಚೇತರಿಕೆ ಪ್ರಮಾಣ 61,700ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವುದು ಕೂಡ ಕನಿಷ್ಠವಾಗಿದೆ ಎನ್ನುತ್ತಾರೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು.

    ಜತೆಗೆ, ಸೆಪ್ಟಂಬರ್​ ಒಂದರಿಂದ ಅನ್ವಯವಾಗುವಂತೆ ಆರ್ಥಿಕ ಪರಿಸ್ಥಿತಿ ಚೇತರಿಕೆಗಾಗಿ ದೇಶದಲ್ಲಿ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ, ಈ ನಿರ್ಬಂಧಗಳ ತೆರವು ದುಬಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

    ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts