More

    ಒಂದೇ ಹಾವು, ಒಂದೇ ತಿಂಗಳಲ್ಲಿ ಎಂಟು ಬಾರಿ ಬಾಲಕನಿಗೆ ಕಚ್ಚಿದೆ; ಹಾವಿನ ದ್ವೇಷಕ್ಕೆ ಹೊಸ ವ್ಯಾಖ್ಯಾನವೇ?

    ಬಸ್ತಿ(ಉತ್ತರಪ್ರದೇಶ): ಹಾವಿನ ದ್ವೇಷ 12 ವರ್ಷ ಎನ್ನುತ್ತಾರೆ. ಇದು ತೀರಾ ದೂರದ ಮಾತು ಎನ್ನಬೇಕೇನೋ? ಎಕೆಂದರೆ, ಒಂದೇ ತಿಂಗಳಲ್ಲಿ ಒಂದೇ ಹಾವು ತನಗೆ ಎಂಟು ಬಾರಿ ಕಚ್ಚಿದೆ ಎಂದು ಬಾಲಕನೊಬ್ಬ ಹೇಳಿಕೊಂಡಿದ್ದಾನೆ. ಇನ್ನೂ ಅಚ್ಚರಿ ಎಂಬಂತೆ ಪ್ರತಿಬಾರಿಯೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಉತ್ತರಪ್ರದೇಶ ಬಸ್ತಿ ಜಿಲ್ಲೆಯ ರಾಮಪುರ ಗ್ರಾಮದ 17 ವರ್ಷದ ಬಾಲಕ ಯಶರಾಜ್​ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಒಂದು ವಾರದ ಹಿಂದಷ್ಟೇ ಆತ ಹಾವಿನ ಕಡಿತಕ್ಕೆ ಒಳಗಾಗಿದ್ದ. ಈತನ ಕುಟುಂಬದ ಸದಸ್ಯರು ಸಹಾಯ ಮಾಡಿ ಅಂತ ಊರಿನ ಹಾವಾಡಿಗರ ಮೊರೆಯನ್ನೂ ಹೋಗಿದ್ದಾರೆ.

    ಇದನ್ನೂ ಓದಿ; ಸುಮ್​ ಸುಮ್ನೆ ಕೆಮ್ಮಬೇಡಿ, ಕರೊನಾ ಬಗ್ಗೆ ಜೋಕ್​ ಮಾಡ್ಬೇಡಿ; ಈ ಶಾಲೆಗಳಲ್ಲಿ ಪಾಲಿಸಬೇಕಿದೆ ಹಲವು ನಿಯಮ…! 

    ನನ್ನ ಮಗನಿಗೆ ಮೂರನೇ ಬಾರಿ ಕಡಿದಾಗ ಆತನನ್ನು ನಾನು ಬೇರೆ ಊರಿನಲ್ಲಿರುವ ನನ್ನ ಸಂಬಂಧಿಕ ಮನೆಗೆ ಕಳುಹಿಸಿದ್ದೆ. ನನ್ನ ಮಗ ಮನೆ ಬಳಿ ಮತ್ತೆ ಅದೇ ಹಾವನ್ನು ನೋಡಿದ್ದಾನೆ. ಅದು ಅವನಿಗೆ ಕಚ್ಚಿದೆ ಕೂಡ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎನ್ನುತ್ತಾರೆ ತಂದೆ ಚಂದ್ರಮೌಳಿ ಮಿಶ್ರಾ.

    ಆಗಸ್ಟ್​ 25 ರಂದು ಕೂಡ ಆತನಿಗೆ ಹಾವು ಕಚ್ಚಿದೆ. ಆತನಿಗೆ ಗ್ರಾಮದ ವೈದ್ಯರ ಬಳಿಯ ಚಿಕಿತ್ಸೆ ಕೊಡಿಸಲಾಗಿದೆ. ಬೇರೆ ರೀತಿಯಿಂದಲೂ ಅಂದರೆ ಹಾವಡಿಗರೂ ಹೇಳಿದ್ದನ್ನೂ ಪಾಲಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

    ಇದನ್ನೂ ಓದಿ; ಕೋವಿಡ್​ಗೆ ಲಸಿಕೆ ಮದ್ದಲ್ಲ, ಸದ್ಯಕ್ಕೆ ಸಿಗೋದು ಇಲ್ಲ; ಪ್ರಧಾನಿಗೆ ಪತ್ರ ಬರೆದ ಆರೋಗ್ಯ ತಜ್ಞರು 

    ಬಾಲಕನೀಗ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾನೆ. ಅದೇಕೆ ಅವನನ್ನು ಬೆನ್ನತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಮನೆಯಲ್ಲಿ ಹಲವು ಬಾರಿ ಪೂಜೆಯನ್ನು ಮಾಡಿಸಿದ್ದೇವೆ. ಹಾವಾಡಿಗರನ್ನು ಕರೆಯಿಸಿ ಹಾವು ಹಿಡಿಯುವ ಪ್ರಯತ್ನ ಕೂಡ ಮಾಡಿದ್ದೇವೆ ಯಾವುದೂ ಕೂಡ ಫಲ ನೀಡಿಲ್ಲ ಎಂದು ಚಂದ್ರಮೌಳಿ ಹೇಳುತ್ತಾರೆ.

    ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts