

ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಜನರು ಹಸಿವಿನಿಂದ ಬಳಲದಂತೆ ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕಾಲಕ್ಕೆ ತಕ್ಕಂತೆ ಹೊಸ ಸ್ವರೂಪ ಪಡೆದುಕೊಂಡು ಜನರಿಗೆ ಇನ್ನಷ್ಟು ಪಾರದರ್ಶಕ ಹಾಗೂ ಗೊಂದಲರಹಿತ ಸೇವೆ ನೀಡುವ ಸಂಕಲ್ಪ ಮಾಡಿದೆ. ಕರೊನಾ ಆರ್ಭಟ ತಗ್ಗುತ್ತಿದ್ದಂತೆ ಈ ಕುರಿತ ಪ್ರಕ್ರಿಯೆ ಆರಂಭವಾಗಲಿದೆ.
ಕರೊನಾ ಹರಡುತ್ತಿರುವ ಸಂದರ್ಭದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದು ನಮ್ಮ ಮೊದಲ ಆದ್ಯತೆ. ಆ ದಿಕ್ಕಿನಲ್ಲಿ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚೆ ನಡೆಸಿ ಹೊಸ ಕಾರ್ಯಕ್ರಮ ಜಾರಿ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.ಬಹುಮುಖ್ಯವಾಗಿ ಬಿಪಿಎಲ್ ಕಾರ್ಡ್ ಮಾನದಂಡ ಪರಿಷ್ಕರಿಸುವ ಆಲೋಚನೆ ಇದೆ. ಮಾನವೀಯ ನೆಲೆಯಲ್ಲಿ ಕೆಲವರು ಪಡಿತರ ಪಡೆದುಕೊಳ್ಳಲು ಅರ್ಹರಿದ್ದರೂ ನಿಯಮ ಅಡ್ಡಿಯಾಗುತ್ತದೆ. ಹೀಗಾಗಿ ಕಾರ್ಯಸಾಧುವಾದ ನಿಯಮ ಜಾರಿ ಮಾಡುವ ಉದ್ದೇಶವಿದೆ ಎಂದು ಗೋಪಾಲಯ್ಯ ಹೇಳಿದರು.
ಸಚಿವರು ಹೇಳಿದ್ದೇನು?
ಹಂತಹಂತವಾಗಿ ಇಲಾಖೆಯಲ್ಲಿ ನೇಮಕ
15 ದಿನಗಳ ಬಳಿಕ ಹೊಸ ಪಡಿತರ ಚೀಟಿ ಆನ್ಲೈನ್ ಅರ್ಜಿ ಸ್ವೀಕಾರ
ಪಡಿತರ ತೂಕದಲ್ಲಿ ನಿಖರತೆಗೆ ಕೇಂದ್ರೀಕೃತ ಹೊಸ ತಂತ್ರಜ್ಞಾನ ಬಳಕೆ
ತೂಕದ ಮೋಸ ಮಾಡುವವರ ವಿರುದ್ಧ ದಂಡ ಹೆಚ್ಚಳಕ್ಕೆ ಕಾನೂನು
ಸೋರಿಕೆ ತಡೆಯಲು ಉನ್ನತ ಮಟ್ಟದ 5 ಕ್ಷಿಪ್ರ ಕಾರ್ಯಾಚರಣೆ ತಂಡ
ಜುಲೈನಿಂದ ಡಿಸೆಂಬರ್ವರೆಗೆ ಮೂರು ಕೆಜಿ ಅಕ್ಕಿ, ಗೋಧಿ ಜತೆ ರಾಗಿ ಅಥವಾ ಜೋಳ ವಿತರಣೆ