

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ನಡೆಯುವ ವಿಭಿನ್ನ, ವಿಚಿತ್ರ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ, ವ್ಯಾಪಕವಾಗಿ ವೈರಲ್ ಆಗುವ ಮುಖೇನ ನೆಟ್ಟಿಗರನ್ನು ಸೆಳೆಯುತ್ತಿದೆ. ಈ ಪೈಕಿ ನದಿಯಲ್ಲಿದ್ದ ಅಪಾರ ಸಂಖ್ಯೆಯ ನೀರಾನೆಗಳು ಏಕಾಏಕಿ ಮೊಸಳೆಯ ಮೇಲೆ ದಾಳಿ ಮಾಡಿರುವ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಬೃಹತ್ ಸಂಖ್ಯೆಯಲ್ಲಿ ನದಿಯೊಳಗಿದ್ದ ನೀರಾನೆಗಳು, ಆಕ್ರಮಣಕಾರಿ ಮೊಸಳೆಯನ್ನು ಗುರಿಯಾಗಿಸಿಕೊಂಡು, ಬಾಯಲ್ಲಿ ಕಚ್ಚಿ ಎಳೆದಾಡಿದ ದೃಶ್ಯ ನೆಟ್ಟಿಗರ ಎದೆ ಝಲ್ ಎನ್ನಿಸುವಂತಿದೆ.
ತನ್ನ ಭೇಟೆಗಾಗಿ ನೀರಿನಡಿ ಸದ್ದಿಲ್ಲದೆ ಕಾದು ಕೂರುವ ಮೊಸಳೆಯು ನೀರಾನೆಗಳ ಮಧ್ಯೆ ಸಿಲುಕಿ ಒದ್ದಾಡಿದ ದೃಶ್ಯ ನೋಡುಗರನ್ನು ಅಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಕ್ಲಿಪ್ ಅನ್ನು 'ವೈಲ್ಡ್ಲೈಫ್ಮೋರ್' ಎಂಬ ಇನ್ಸ್ಟಾಗ್ರಾಮ್ ಖಾತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. (ಏಜೆನ್ಸೀಸ್).