ಸೆ.28ಕ್ಕೆ 'ಕುಮಾರಿ ಶ್ರೀಮತಿ' ರಿಲೀಸ್​; ಕನ್ನಡದಲ್ಲಿ ಯಾಕಿಲ್ಲ ಎಂದ ನೆಟ್ಟಿಗರು

Untitled design - 2023-09-20T170249.689
Published on

ಬೆಂಗಳೂರು: ಬಹುಭಾಷಾ ನಟಿ ನಿತ್ಯಾ ಮೆನನ್​ ಅಭಿನಯದ ಹೊಸ ವೆಬ್​ ಸೀರೀಸ್​ 'ಕುಮಾರಿ ಶ್ರೀಮತಿ' ರಿಲೀಸ್​ಗೆ ಸಜ್ಜಾಗಿದ್ದು, ಈ ಮಧ್ಯೆ ಒಂದು ನಿಮಿಷದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಾಲ್ಕು ಭಾಷೆಯಲ್ಲಿ ಮೂಡಿಬರುತ್ತಿರುವ ಈ ವೆಬ್​ ಸರಣಿ ಕನ್ನಡದಲ್ಲಿ ಯಾಕೆ ಲಭ್ಯವಿಲ್ಲ ಎಂದು ನಟಿಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

ತಮ್ಮ ಮುಗ್ಧ ನಟನೆಯ ಮೂಲಕ ಚಿತ್ರರಸಿಕರ ಗಮನೆ ಸೆಳೆಯುವ ನಿತ್ಯಾ ಮೆನನ್ ಅವರ ಮುಂಬರುವ ವೆಬ್ ಸೀರೀಸ್ 'ಕುಮಾರಿ ಶ್ರೀಮತಿ' ಬಗ್ಗೆ  ಅಭಿಮಾನಿಗಳಲ್ಲಿ ಇದೀಗ ಸಾಕಷ್ಟು ನಿರೀಕ್ಷೆ ಮೂಡಿದೆ. ಗೋಮಟೇಶ್ ಉಪಾಧ್ಯೆ ನಿರ್ದೇಶಿಸಿದ ಈ ಸರಣಿಯನ್ನು ಶ್ರೀನಿವಾಸ್ ರಚಿಸಿದ್ದಾರೆ. ಇತ್ತೀಚೆಗಷ್ಟೇ ಇದರ ಟೀಸರ್ ಅನ್ನು 'ಮಹಾನಟಿ' ಕೀರ್ತಿ ಸುರೇಶ್ ಆನ್‌ಲೈನ್‌ನಲ್ಲಿ ಬಿಡುಗಡೆಗೊಳಿಸಿದರು.

7 ಸಂಚಿಕೆಯನ್ನು ಒಳಗೊಂಡ ಈ ಸರಣಿಯಲ್ಲಿ ನಿರುಪಮ್, ಗೌತಮಿ, ತಿರುವೀರ್, ತಲ್ಲೂರಿ ರಾಮೇಶ್ವರಿ, ನರೇಶ್, ಮುರಳಿ ಮೋಹನ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವೈಜಯಂತಿ ಎಂಟರ್​ಟೈನ್ಮೆಂಟ್ಸ್ ಮತ್ತು ಸ್ವಪ್ನಾ ಸಿನಿಮಾದ ವೆಬ್ ವಿಭಾಗವಾದ ಅರ್ಲಿ ಮಾನ್ಸೂನ್ ಟೇಲ್ಸ್ ಅಡಿಯಲ್ಲಿ ಸ್ವಪ್ನಾ ದತ್ ಮತ್ತು ಪ್ರಿಯಾಂಕಾ ದತ್ ನಿರ್ಮಾಣ ಮಾಡಿದ್ದಾರೆ.

ಸೆಪ್ಟೆಂಬರ್ 28 ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ತೆರೆ ಕಾಣಲಿರುವ 'ಕುಮಾರಿ ಶ್ರೀಮತಿ' ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್​ಗೆ ಲಭ್ಯವಿರಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net