

ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಸ್ಥಗಿತಗೊಂಡಿದೆ. ಚಿತ್ರೀಕರಣ ಶುರುವಾದರೂ, ಬಿಡುಗಡೆಗೆ ಮಾತ್ರ ಸರ್ಕಾರ ಅನುಮತಿ ನೀಡಿಲ್ಲ. ಹೀಗಿರುವಾಗಲೇ ಓಟಿಟಿ ವೇದಿಕೆಗೆ ಹೆಚ್ಚಿನ ಡಿಮಾಂಡ್ ಸೃಷ್ಟಿಯಾಗಿದ್ದು, ಚಿತ್ರ ನಿರ್ಮಾಪಕರು ಓಟಿಟಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಬಾಲಿವುಡ್ನ ಸ್ಟಾರ್ ಕಲಾವಿದರ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಇತ್ತೀಚೆಗಷ್ಟೇ ಡಿಸ್ನಿ ಹಾಟ್ಸ್ಟಾರ್ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ನೆಟ್ಫ್ಲಿಕ್ಸ್ ಒಟ್ಟು 17 ಸಿನಿಮಾ, ವೆಬ್ ಸರಣಿಗಳನ್ನು ರಿಲೀಸ್ ಮಾಡುವ ಬಗ್ಗೆ ಹೇಳಿಕೊಂಡಿದೆ.
ಇದನ್ನೂ ಓದಿ: VIDEO: ನಟಿ ಸಂಯುಕ್ತಾ ಕೈಗೆ ಸುತ್ತಿಕೊಳ್ತು ಹಾವು..
ಗುಂಜನ್ ಸಕ್ಸೆನಾ; ಎ ಕಾರ್ಗಿಲ್ ಗರ್ಲ್, ಡೋಲಿ ಕಿಟ್ಟಿ ಔರ್ ಚಮಕ್ತೆ ಸಿತಾರೆ, ತೋರ್ಬಾಜ್, ಕ್ಲಾಸ್ ಆಫ್ 83, ತ್ರಿಭಂಗಾ ಸೇರಿ ಒಟ್ಟು 12 ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇದರ ಜತೆಗೆ ಐದು ಡ್ರಾಮಾ ಸೀರೀಸ್‌ಗಳು ಬಿತ್ತರವಾಗಲಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಮೂಲಕವೇ ಗಮನ ಸೆಳೆದ ಟಬು ಮತ್ತು ಇಶಾನ್ ಖಟ್ಟರ್ ನಟನೆಯ 'ಎ ಸೂಟಬಲ್ ಬಾಯ್', 'ಮಸಬಾ ಮಸಬಾ', 'ಬಾಂಬೆ ಬೇಗಮ್ಸ್' ಮತ್ತು 'ಮಿಸ್ ಮ್ಯಾಚ್ಡ್' ಸಹ ಸೇರಿವೆ.
ಇನ್ನು ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ಸಡಕ್2 ಮತ್ತು ಸುಶಾಂತ್ ಸಿಂಗ್ ನಟನೆಯ ದಿಲ್ ಬೇಚಾರಾ ಸಿನಿಮಾಗಳು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿವೆ. ಇತ್ತ ಅಮೆಜಾನ್ ಪ್ರೈಂನಲ್ಲಿ ಅಭಿಷೇಕ್ ಬಚ್ಚನ್ ನಟನೆಯ ಚೊಚ್ಚಲ ಬ್ರೀಥ್ ವೆಬ್ ಸಿರೀಸ್ ಸಹ ತೆರೆಕಂಡಿತ್ತು. ಇದೀಗ ನೆಟ್ಫ್ಲಿಕ್ಸ್ ಸಿನಿಮಾ ಪಟ್ಟಿಯನ್ನು ಹೊರಗೆಡವಿದ್ದು, ಶೀಘ್ರದಲ್ಲಿ ಅವುಗಳ ಬಿಡುಗಡೆ ದಿನಾಂಕವನ್ನೂ ಘೋಷಿಸಲಿದೆ. (ಏಜೆನ್ಸೀಸ್)