More

    ಅರ್ಜುನ್​ -ಮಲೈಕಾ ಮದುವೆಗೆ ಸೋನಮ್​ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?

    ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಪರಸ್ಪರ ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆರಂಭದಲ್ಲಿ ಈ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದ ಅವರು, ಈಗ ಬಹಿರಂಗವಾಗಿ ತಾವು ಪ್ರೀತಿಸುತ್ತಿರುವುದನ್ನು ಇಬ್ಬರೂ ಹೇಳಿಕೊಂಡಿದ್ದಾರೆ.

    ಪ್ರೀತಿಯೇನೋ ಓಕೆ. ಮದುವೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಬಹುಶಃ ಇಷ್ಟರಲ್ಲಿ ಇಬ್ಬರೂ ಮದುವೆ ಆಗಿ ಬಿಡುತ್ತಿದ್ದರೇನೋ? ಆದರೆ, ಅರ್ಜುನ್​ ಮನೆಯಲ್ಲಿ ಇನ್ನೂ ಈ ವಿಷಯವಾಗಿ ಹಲವರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮದುವೆ ಪೋಸ್ಟ್​ಪೋನ್​ ಆಗುತ್ತಲೇ ಇದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: VIDEO: ನಟಿ ಸಂಯುಕ್ತಾ ಕೈಗೆ ಸುತ್ತಿಕೊಳ್ತು ಹಾವು..

    ಪ್ರಮುಖವಾಗಿ ಮಲೈಕಾ ಮತ್ತು ಅರ್ಜುನ್​ ವಯಸ್ಸಿನಲ್ಲಿ 10 ವರ್ಷಗಳ ಅಂತರವಿದೆ. ಮಲೈಕಾ ಮೊದಲ ಮಗ ಸಹ ಈಗ ಟೀನೇಜರ್​ ಆಗಿದ್ದಾನೆ. ಹೀಗಿರುವಾಗ ವಯಸ್ಸಿನಲ್ಲಿ ಹಿರಿಯವಳನ್ನು ಮದುವೆಯಾಗುತ್ತಿರುವ ಬಗ್ಗೆ ಅರ್ಜುನ್​ ಮನೆಯಲ್ಲಿ ಸಹಜವಾಗಿಯೇ ವಿರೋಧವಿದೆ.

    ಈ ವಿಷಯದಲ್ಲಿ ಅರ್ಜುನ್​ ಪರ ಅವರ ಚಿಕ್ಕಪ್ಪಂದಿರಾದ ಅನಿಲ್​ ಕಪೂರ್​, ಸಂಜಯ್​ ಕಪೂರ್​ ಮತ್ತು ಸಹೋದರಿ ಜಾಹ್ನವಿ ನಿಂತಿದ್ದರರೆ, ವಿರೋಧವಾಗಿ ತಂದೆ ಬೋನಿ ಕಪೂರ್​ ಮತ್ತು ಸಹೋದರಿಯರಾದ ಸೋನಮ್​ ಮತ್ತು ಅನ್ಶುಲಾ ಕಪೂರ್​ ಇದ್ದಾರೆ ಎಂದು ಹೇಳಲಾಗುತ್ತಿದೆ.

    ಇಷ್ಟಕ್ಕೂ ಸೋನಮ್​ ಯಾಕೆ ಈ ಮದುವೆಗೆ ಅಡ್ಡಪಡಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಮಲೈಕಾ ಮತ್ತು ಅರ್ಜುನ್​ ವಯಸ್ಸಿನ ಅಂತರದ ಬಗ್ಗೆ ಸೋನಮ್​ಗೆ ಅಷ್ಟು ಆಸಕ್ತಿ ಇಲ್ಲವಾದರೂ, ಒಟ್ಟಾರೆ ಮಲೈಕಾ ಬಗ್ಗೆ ಸೋನಮ್​ಗೆ ಅಷ್ಟಕ್ಕಷ್ಟೇ ಎಂಬ ಸುದ್ದಿ ಇದೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಪ್ರಕರಣ ಸಿಬಿಐಗೆ ನೀಡಿ; ಅಮಿತ್​ ಶಾ ಹೇಳಿದ್ದೇನು?

    ಅದಕ್ಕೆ ಕಾರಣ, ಕೆಲವು ವರ್ಷಗಳ ಹಿಂದೆ ಪಾರ್ಟಿಯೊಂದರಲ್ಲಿ ಮಲೈಕಾ ವಿಪರೀತ ಕುಡಿದು ಚಿತ್ತಾಗಿದ್ದರಂತೆ. ಅವರಿಗೆ ಸರಿಯಾಗಿ ಹೆಜ್ಜೆ ಇಡುವುದಕ್ಕೂ ಆಗುತ್ತಿರಲಿಲ್ಲವಂತೆ. ಅವರ ಸಹಾಯಕ್ಕೆ ಹೋದ ಸೋನಮ್​ಳನ್ನು ಬೈದು ಕಳಿಸಿದ್ದರಂತೆ. ಈ ಘಟನೆಯಿಂದ ಸೋನಮ್​ ನಿಜಕ್ಕೂ ಶಾಕ್​ ಆಗಿದ್ದರಂತೆ. ಅಷ್ಟೇ ಅಲ್ಲ, ಈ ಘಟನೆ ಆಕೆಯ ಮೇಲೆ ವಿಪರೀತ ಪರಿಣಾಮ ಬೀರಿರುವುದರಿಂದ, ಮಲೈಕಾರನ್ನು ತನ್ನ ಅತ್ತಿಗೆಯನ್ನಾಗಿ ನೋಡುವುದಕ್ಕೆ ಸೋನಂಗೆ ಮನಸ್ಸಿಲ್ಲವಂತೆ. ಹಾಗಾಗಿ ಮಲೈಕಾರನ್ನು ಅರ್ಜುನ್​ ವರಿಸುವುದು ಸೋನಮ್​ಗೆ ಸುತಾರಾಂ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ.

    ಹೀಗೆ ಮನೆಯಲ್ಲಿ ಪರ-ವಿರೋಧ ಎದ್ದಿರುವುದರಿಂದ, ಏನು ಮಾಡಬೇಕೆಂದು ಗೊತ್ತಾಗದ ಅರ್ಜುನ್​ ಕಪೂರ್​ ಮದುವೆಯನ್ನು ಮುಂದೂಡುತ್ತಿದ್ದಾರಂತೆ. ಈ ಪ್ರಕರಣ ಕೊನೆಗೆ ಹೇಗೆ ಬಗೆಹರಿಯುತ್ತದೋ ಗೊತ್ತಿಲ್ಲ?

    ವಿಜಯ್​ ಸಂಭಾವನೆಯಲ್ಲಿ ಕಡಿತ … ಹೊಸ ಚಿತ್ರಕ್ಕೆ ಅವರ ಪೇಮೆಂಟ್​ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts