ಸುಶಾಂತ್​ ಸಿಂಗ್​ ಪ್ರಕರಣ ಸಿಬಿಐಗೆ ನೀಡಿ; ಅಮಿತ್​ ಶಾ ಹೇಳಿದ್ದೇನು?

Sushant-Singh
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವನ್ನಪ್ಪಿ ತಿಂಗಳ ಮೇಲಾಯಿತು. ಬಾಲಿವುಡ್​ನಲ್ಲಿ ಅವರ ಸಾವು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಘಟಾನುಘಟಿ ಸ್ಟಾರ್​ ನಟರಿಗೂ ಸುಶಾಂತ್​ ಸಾವು ಇಕ್ಕಟ್ಟಿಗೆ ಸಿಲುಕಿಸಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಸುಶಾಂತ್​ ಸಿಂಗ್​ ಆತ್ಮಹತ್ಯೆ ಸಹಜ ಸಾವಲ್ಲ. ಅದೊಂದು ವ್ಯವಸ್ಥಿತ ಕೊಲೆ ಎಂದು ಸಾಕಷ್ಟು ಮಂದಿ ಆರೋಪಿಸಿ, ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದ್ದರು. ಅದರಂತೆ ಇದೀಗ ಬಿಹಾರ ಸಂಸದರೂ ಈ ಕೇಸ್​ ಅನ್ನು ಸಿಬಿಐಗೆ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಸುಶಾಂತ್​ ಸಿಂಗ್​ ಮೂಲತಃ ಬಿಹಾರದವರು. ನೆಪೋಟಿಸಂನಿಂದ ಬೇಸತ್ತು ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನವರು ಆರೋಪಿಸಿ, ಕರಣ್​ ಜೋಹರ್​, ಸಲ್ಮಾನ್​ ಖಾನ್​ ಸೇರಿ ಹಲವರ ವಿರುದ್ಧ ಧರಣಿ ಕೈಗೊಂಡಿದ್ದರು. ಇದೀಗ ಬಿಹಾರದ ಸಂಸದ ಪಪ್ಪು ಯಾದವ್​ ಸುಶಾಂತ್​ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಸಂಸದರ ಪತ್ರಕ್ಕೆ ಅಮಿತ್​ ಶಾ ಅವರ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದ್ದು, ಸಂಬಂಧಪಟ್ಟ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ. ಇನ್ನು ಈಗಾಗಲೇ ಸುಶಾಂತ್​ ಸಾವಿನ ಬಗ್ಗೆ ಮುಂಬೈ ಪೊಲೀಸ್​ ಇಲಾಖೆ, ತನಿಖೆ ಮುಂದುವರಿಸಿದ್ದು, 30ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net