ಚಿರು ಅಗಲಿದ ತಿಂಗಳ ಬಳಿಕ ಸರ್ಜಾ ಕುಟುಂಬ ನೆರವೇರಿಸಿದ ಚಂಡಿಕಾ ಹೋಮದ ರಹಸ್ಯವೇನು?

Sarja Family
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನ ಹೊಂದಿ ತಿಂಗಳು ಕಳೆದರೂ ಚಿರು ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕುಟುಂಬ ಹಾಗೂ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಸರ್ಜಾ ಕುಟುಂಬದಲ್ಲಿ ಇನ್ನು ನೀರವ ಮೌನ ಆವರಿಸಿದ್ದು, ಚಿರು ನೆನಪಲ್ಲೇ ದಿನ ದೂಡುತ್ತಿದ್ದಾರೆ. ಇವೆಲ್ಲದರ ನಡುವೆ ಸರ್ಜಾ ಕುಟುಂಬದಲ್ಲಿ ಚಂಡಿಕಾ ಹೋಮ ನೆರವೇರಿದೆ.

ಚಿರು ಇಲ್ಲದ ಮನೆಯಲ್ಲಿ ಚಂಡಿಕಾ ಹೋಮ ನಡೆದಿದ್ದಾರೂ ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಚಿರು ಹೃದಯಾಘಾತದಿಂದ ಸಾವಿಗೀಡಾಗಿ ಒಂದು ತಿಂಗಳು ಕಳೆದಿದೆ. ಕನಕಪುರದ ನಲೆಕಲಹಳ್ಳಿಯಲ್ಲಿ ಒಂದು ತಿಂಗಳ ಪುಣ್ಯಸ್ಮರಣೆಯನ್ನು ಸರ್ಜಾ ಕುಟುಂಬ ನೆರವೇರಿಸಿದೆ. ಇದರ ಬೆನ್ನಲ್ಲೇ ಅರ್ಜುನ್​ ಸರ್ಜಾ ಅವರು ಕೋರಮಂಗಲದ ತಮ್ಮ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ್ದಾರೆ.

ಅಂದಹಾಗೆ ಚಿರು ನಿಧನದ ಬೆನ್ನಲ್ಲೇ ಸರ್ಜಾ ಕುಟುಂಬ ಚಂಡಿಕಾ ಹೋಮದ ಮಾಡಿಸಿದ್ದೇಕೆ? ಚಿರು ಆತ್ಮಕ್ಕೆ ಶಾಂತಿ ದೊರಕಿಲ್ಲವಾ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ, ಚಂಡಿಯಾ ಹೋಮ ಮಾಡಿಸಿದ್ದಕ್ಕೆ ಬೇರೆ ಕಾರಣವೇ ಇದೆ. ಲಾಕ್​ಡೌನ್​ ಸಮಯದಲ್ಲಿ ಸರ್ಜಾ ಕೂಡು ಕುಟುಂಬದ ಕೆಲ ವಿಡಿಯೋಗಳು ವೈರಲ್​ ಆಗಿದ್ದವು. ಅಲ್ಲದೆ, ಚಿರು ಹಾಗೂ ಧ್ರುವ ನಡುವಿನ ಆತ್ಮೀಯತೆ ಸಾರುವ ಅನೇಕ ವಿಡಿಯೋಗಳು ಭಾರಿ ಸದ್ದು ಮಾಡಿದ್ದವು. ಹೀಗಾಗಿ ದೃಷ್ಟಿ ನಿವಾರಣೆಗಾಗಿ ಚಂಡಿಕಾ ಹೋಮ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಚಿರು ಸಾವಿನ ಬೆನ್ನಲ್ಲೇ ಧ್ರುವ ಮಾನಸಿಕವಾಗಿ ಕುಗ್ಗಿ ಆಸ್ಪತ್ರೆಗೆ ಸೇರಿದ್ದರು. ಹೀಗೆ ಮನೆಮಂದಿಯವರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಕೂಡು ಕುಟುಂಬದ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿರಬಹುದೆಂದು ಸರ್ಜಾ ಕುಟುಂಬ ದೃಷ್ಟಿ ನಿವಾರಣೆಗಾಗಿ ಚಂಡಿಕಾ ಹೋಮದ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಯಾಗ ಮಾಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net