ಸಂಗಾತಿಯನ್ನು ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದ ಹೋರಿ; ಮಾಡಿದ್ದಾದರೂ ಏನು?

COW
Published on

ಮಧುರೈ: ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಹಸು ಮಾರಾಟ ಮಾಡಿದ. ಅದನ್ನು ಮಾಲೀಕರ ವಾಹನಕ್ಕೂ ಹತ್ತಿಸಿದ. ಆದರೆ, ಅದರ ಜತೆಗಿರುತ್ತಿದ್ದ ಹೋರಿಯೊಂದು ತನ್ನ ಜತೆಗೆ, ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಪಾಲಮೆಂದು ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಮಣಿಕಂಠ ತಾನು ಸಾಕಿದ್ದ ಲಕ್ಷ್ಮೀ ಎಂಬ ಹಸುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ. ಅದನ್ನು ಕೊಂಡೊಯ್ಯುತ್ತಿದ್ದಾಗ ವಾಹನಕ್ಕೆ ಅಡ್ಡಬಂದ ದೇವರಿಗೆ ಬಿಟ್ಟಿದ್ದ ಹೋರಿ ಮಂಜಮಲೈ ಜಪ್ಪಯ್ಯ ಅಂದರೂ ಮುಂದಕ್ಕೆ ಹೋಗಲು ಬಿಡಲಿಲ್ಲ. ವಾಹನವನ್ನು ಚಲಾಯಿಸಿಕೊಂಡು ಹೋದರೂ, ಒಂದು ಕಿ.ಮೀ.ಗೂ ಹೆಚ್ಚು ದೂರದವರೆಗೂ ಬೆನ್ನತ್ತಿದೆ. ವಾಹನದ ಸುತ್ತಲೂ ತಿರುಗುತ್ತ ಹಸುವನ್ನು ಸಂತೈಸುತ್ತಿತ್ತು.

ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ಹಸುವಿನ ಮಾಲೀಕನಿಗೆ ಹಣ ನೀಡಲು ಮುಂದಾದರು. ಕೊನೆಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಓ. ಪನ್ನಿರಸೆಲ್ವಂ ಪುತ್ರ ಜಯಪ್ರದೀಪ್​ ಗಮನಕ್ಕೂ ಬಂದಿದೆ. ಹಸು ಖರೀದಿಸಿದ್ದವನಿಗೆ ಅದರ ಹಣ ನೀಡಿ, ಹೋರಿಗೆ ಜತೆಯಾಗಿಸಿ ದೇವಸ್ಥಾನಕ್ಕೆ ದಾನ ನೀಡಿದ್ದಾರೆ.

ಹೋರಿ ಹೋರಾಟದ ವಿಡಿಯೋ ಇಲ್ಲಿದೆ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net