ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ

dog women
Published on

ನವದೆಹಲಿ: ಈ ಡಿಜಿಟಲ್​ ಯುಗದಲ್ಲಿ ಆನ್​ಲೈನ್​ ವೇದಿಕೆಗಳು ಹಣ ಗಳಿಕೆಗೆ ದಾರಿಯಾಗಿವೆ. ಆನ್​ಲೈನ್​ನಲ್ಲಿ ನಮ್ಮ ಪ್ರಭಾವ ಹೆಚ್ಚಾದಷ್ಟು ಹಣ ಗಳಿಕೆ ಹೆಚ್ಚಾಗುತ್ತದೆ. ಸೆಲೆಬ್ರಿಟಿಗಳನ್ನು ಈ ಕಾರಣಕ್ಕೆ ಇನ್​ಫ್ಲುಯೆನ್ಸ್​ರ್​ ಎಂದು ಕರೆಯಲಾಗುತ್ತದೆ.

ಅತಿ ಹೆಚ್ಚು ಲೈಕ್ಸ್​, ಹಿಟ್ಸ್​ಗಳು ದೊರೆತದ್ದೇ ಆದಲ್ಲಿ ಇನ್​ಫ್ಲುಯೆನ್ಸರ್​ ಪಟ್ಟಿಗೆ ಸೇರಿಕೊಳ್ಳಹುದು. ಕೆಲವರು ತಮ್ಮ ಪ್ರಚಾರ, ಜನಪ್ರಿಯತೆಗಾಗಿ ಇಷ್ಟೆಲ್ಲ ಹೆಣಗಾಡಿದರೆ, ಇನ್ನು ಕೆಲವರು ಕಂಪನಿಗಳ ಬ್ರಾಂಡ್​ ಪ್ರಮೋಟ್​ ಮಾಡಲು ಮುಂದಾಗುತ್ತಾರೆ.

ಇನ್ನು ಕೆಲವರು ವಿಚಿತ್ರ ಸಂಗತಿಗಳ ಮೂಲಕ ಆನ್​ಲೈನ್​ನಲ್ಲಿ ಹೆಸರು ಮಾಡುತ್ತಾರೆ. ಹಣವನ್ನು ಸಂಪಾದಿಸುತ್ತಾರೆ. ಆನ್​ಲೈನ್​ ಗಾಂಕಾ ಸೇವನೆ ಮಾಡಿ ಹಣಗಳಿಸುವವರು, ಬಳಸಿದ ಸಾಕ್ಸ್​, ಶೂ ಗಳನ್ನು ಮಾರಾಟ ಮಾಡುವ ಮಾಡೆಲ್​ಗಳು, ಕಾಳಿನ ಚಿತ್ರವನ್ನು ಮಾರಿ ಹಣ ಸಂಪಾದಿಸುವವರು ಇಂಥ ಹಲವು ವಿಚಿತ್ರ ವ್ಯಕ್ತಿಗಳು ಕಾಣ ಸಿಗುತ್ತಾರೆ.

ಯಾವುದೇ ಆದಾಯವಿಲ್ಲದಿದ್ದರೂ ಇಂಥವರು ನೋಡನೋಡುತ್ತಲೇ ಲಕ್ಷಾಧಿಪತಿಗಳು ಕೋಟ್ಯಧೀಶರೆನಿಸಿಕೊಳ್ಳುತ್ತಾರೆ. ಇಂಥವರಿಗೆ ಸಾಮಾಜಿಕ ಜಾಲತಾಣಗಳೇ ಸಂಪಾದನೆಯ ದಾರಿಯಾಗಿವೆ.

ಇಲ್ಲೊಬ್ಬಳು 'ನಾಯಿ'ಯಂತಾಡುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದಿಸುತ್ತಾಳೆ. ನಾಯಿಯಂತೆ ವರ್ತಿಸಿ ಶೂಟ್​ ಮಾಡಿದ ವಿಡಿಯೋಗಳನ್ನು ಅಪಲೋಡ್​ ಮಾಡಿದ್ದನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಇದೇ ಕಾರಣಕ್ಕೆ ಹಲವು ಕಂಪನಿಗಳು ಅವಳಿಂದ ಪ್ರಚಾರ ಪಡೆಯುತ್ತಿವೆ.

ಈಕೆಯ ಹೆಸರು ಜಿಯನ್ನಾ ಫಿಲಿಪ್ಸ್​. 21 ವರ್ಷದ ಯುವತಿ ಈ ಹಿಂದೆ ಆಪ್ಟಿಷಿಯನ್​ ಆಗಿದ್ದಳು. ಆದರೆ, ತನಗೆ ನಾಯಿಯಂತಾಡುವುದು ಬಹಳ ಇಷ್ಟ ಎಂದು ಹೇಳಿಕೊಳ್ಳುತ್ತಾಳೆ. ನಾನು ನಾಯಿಮರಿ ಎಂದೇ ಭಾವಿಸಿಕೊಳ್ಳುತ್ತೇನೆ. ತನಗಿರುವ ಈ ವಿಚಿತ್ರ ಗೀಳನ್ನೇ ಸಂಪಾದನೆಗೆ ದಾರಿ ಮಾಡಿಕೊಂಡಿದ್ದಾಳೆ. ನಾಯಿಯಂತೆ ಬಾಲ್​ ಹಿಡಿಯಲು ಓಡುವುದು, ನೆಲದ ಮೇಲೆ ಉರುಳಾಡುವುದು, ಕತ್ತಿಗೆ ಸರಪಳಿ ಬಿಗಿಸಿಕೊಂಡು ನೀರು ಕುಡಿಯುವುದು ಮೊದಲಾದ ವಿಡಿಯೋಗಳನ್ನು ಅಪಲೋಡ್​ ಮಾಡಿದ್ದಾಳೆ.

ಅದರ ಝಲಕ್​ ಇಲ್ಲಿದೆ ನೋಡಿ.............!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net