ಬಾಲಿವುಡ್​ ನಟ ಫರ್ಹಾನ್​ ಅಖ್ತರ್​ಗೂ ಕರೊನಾ ಆತಂಕ

Farhan-Akhtars
Published on

ಕರೊನಾ ಹರಡುವಿಕೆ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚು ಜನ ಈ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಬಾಲಿವುಡ್​ ಮಂದಿಯನ್ನೂ ಈ ಸೋಂಕು ಬಿಟ್ಟಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ಮಂದಿಯ ಭದ್ರತಾ ಸಿಬ್ಬಂದಿಗೆ ಈ ಸೋಂಕು ಹೆಚ್ಚೆಚ್ಚು ಕಂಡು ಬರುತ್ತಿದೆ. ಇದೀಗ ಬಾಲಿವುಡ್ ನಟ ಫರ್ಹಾನ್​ ಅಖ್ತರ್ ಮನೆಯ ಭದ್ರತಾ ಸಿಬ್ಬಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

ಹೌದು, ಮುಂಬೈನ ಬಾಂದ್ರಾ ಬಳಿಯಲ್ಲಿ ನಟ ಫರ್ಹಾನ್​ ಅಖ್ತರ್ ಮನೆಯಿದೆ. ಆ ಮನೆಯಲ್ಲಿಯೇ ಫರ್ಹಾನ್​ ಮತ್ತು ಕುಟುಂಬ ವಾಸವಿದೆ. ಇದೀಗ ಅದೇ ಮನೆಯ ಭದ್ರತಾ ಸಿಬ್ಬಂದಿಗೆ ಕರೊನಾ ದೃಢಪಟ್ಟಿದ್ದು, ಆತಂಕ ಸೃಷ್ಟಿಯಾಗಿದೆ. ಅಂದಹಾಗೆ, ಇತ್ತೀಚೆಗಷ್ಟೇ ನಟಿ ರೇಖಾ ಮನೆಯ ಹಲವು ಭದ್ರತಾ ಸಿಬ್ಬಂದಿಗೆ ಕರೊನಾ ಇರುವುದು ಖಚಿತವಾಗಿತ್ತು. ಇದೀಗ ಫರ್ಹಾನ್​ ಅಖ್ತರ್​ ಮನೆಯ ಸಿಬ್ಬಂದಿಗೆ ಕರೊನಾ ಬರಲು ರೇಖಾ ಅವರ ಮನೆಯ ಭದ್ರತಾ ಸಿಬ್ಬಂದಿ ಎಂದೇ ಹೇಳಲಾಗುತ್ತಿದೆ.

ಬಾಂದ್ರಾದಲ್ಲಿ ಫರ್ಹಾನ್​ ಮನೆ ಮತ್ತು ರೇಖಾ ಮನೆಗೆ ಹೆಚ್ಚು ಅಂತರವಿಲ್ಲ. ಹೀಗಿರುವಾಗ ಎರಡೂ ಮನೆಯ ಭದ್ರತಾ ಸಿಬ್ಬಂದಿ ಪರಸ್ಪರ ಸಂಪರ್ಕದಲ್ಲಿರಬಹುದು. ಆ ಕಾರಣಕ್ಕೆ ಕರೊನಾ ಬಂದಿರಬಹುದು ಎನ್ನಲಾಗುತ್ತಿದೆ. ಸದ್ಯ ಕರೊನಾ ತಗುಲಿರುವ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಘ್ರದಲ್ಲಿ ಫರ್ಹಾನ್​ ಸಹ ಪರೀಕ್ಷೆಗೆ ಒಳಪಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net