

‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯಲ್ಲಿ ‘ಗಲೀ ಗಲೀ ಮೇ ಫಿರ್ತಾ ಹೂಂ ...’ ಎಂಬ ಹಾಡಿಗೆ ಯಶ್ ಜತೆಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್, ನಾಲ್ಕು ತಿಂಗಳ ನಂತರ ಕೊನೆಗೂ ಅಬುಧಾಬಿಯಿಂದ ಹೊರಟಿದ್ದಾರೆ.
ಮಾರ್ಚ್ನಲ್ಲಿ ಮ್ಯಾಗಜೀನ್ವೊಂದರ ಫೋಟೋ ಶೂಟ್ಗಾಗಿ ಮೌನಿ ಅಬುಧಾಬಿಗೆ ಹೋಗಿದ್ದರು. ಕೆಲಸ ಮುಗಿದು ಇನ್ನೇನು ವಿಮಾನ ಹತ್ತಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಇಂಟರ್ನ್ಯಾಷನಲ್ ಫ್ಲೈಟುಗಳು ರದ್ದಾದವು. ಬೇರೆ ದಾರಿ ಇಲ್ಲದೆ ಒಮ್ಮ ಹಳೆಯ ಸ್ನೇಹಿತೆಯ ಜತೆಗೆ ಉಳಿದರು. ವಾರ, ಹತ್ತು ದಿವಸದಲ್ಲಿ ಎಲ್ಲ ಸರಿ ಹೋಗಬಹುದು ಎಂದು ಕಾದಿದ್ದ ಮೌನಿಗೆ ನಿರಾಸೆ ಹೆಚ್ಚಾಯಿತು. ಏಕೆಂದರೆ, ಲಾಕ್ಡೌನ್ ಎರಡು ತಿಂಗಳವರೆಗೂ ಮುಂದುವರಿಯಿತು. ಈ ಮಧ್ಯೆ ತಮ್ಮ ತಾಯಿ ಮತ್ತು ಸಹೋದರನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ವಿಡಿಯೋ ಚಾಟಿಂಗ್ ಮೂಲಕವೇ ಮನೆಯವರ ಜತೆಗೆ ದಿನಾ ಸಂಪರ್ಕದಲ್ಲಿದ್ದ ಮೌನಿ, ಅದರ ಮೂಲಕವೇ ತಾಯಿಯಿಂದ ಅಡುಗೆ ಮಾಡುವುದನ್ನೂ ಹೇಳಿಸಿಕೊಳ್ಳುತ್ತಿದ್ದರಂತೆ. ಹೀಗೆ ಹಲವು ದಿನಗಳ ನಂತರ ಲಾಕ್ಡೌನ್ ಮುಗಿಯಿತು. ಆದರೆ, ಅಂತಾರಾಷ್ಟ್ರೀಯ ಫ್ಲೈಟುಗಳ ಹಾರಾಟ ಮಾತ್ರ ಪ್ರಾರಂಭವಾಗರಲಿಲ್ಲ. ಈಗ ಕೊನೆಗೂ ವಿಮಾನ ಪ್ರಯಾಣ ಪ್ರಾರಂಭ ವಾಗಿದ್ದು, ಮೌನಿ ಸಹ ವಿಮಾನ ಹತ್ತಿದ್ದಾರೆ. ಹಾಗಂತ ಅವರು ಭಾರತಕ್ಕೆ ಬರುತ್ತಿಲ್ಲ. ಲಂಡನ್ಗೆ ಹಾರಿದ್ದಾರೆ. ಅಲ್ಲೊಂ ದಿಷ್ಟು ಕೆಲಸ ಮುಗಿಸಿ ಭಾರತಕ್ಕೆ ವಾಪಸ್ಸಾಗು ತ್ತಾರಂತೆ. - (ಏಜನ್ಸೀಸ್)