ಪಾಸ್​​ವರ್ಡ್​ ಶೇರಿಂಗ್: ಮಹತ್ವದ ಕ್ರಮಕ್ಕೆ ಮುಂದಾದ ನೆಟ್​ಪ್ಲಿಕ್ಸ್​

netflix
netflix
Published on

ಮುಂಬೈ: ಜನಪ್ರಿಯ ಓಟಿಟಿ ತಾಣವಾದ ನೆಟ್​ಪ್ಲಿಕ್ಸ್​​ನ್ನು ಭಾರತದಲ್ಲಿಯೂ ಸಾಕಷ್ಟು ಜನ ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಮನರಂಜನೆಗಾಗಿ ಓಟಿಟಿ ವೇದಿಕೆಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ.

ಆದರೆ, ನೆಟ್​ಪ್ಲಿಕ್ಸ್​ ಸಂಸ್ಥೆಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಅದೇನಪ್ಪಾ ಅಂದರೆ, ನೆಟ್​ಪ್ಲಿಕ್ಸ್​ನಲ್ಲಿ ಇರುವ ಅಕೌಂಟ್​ ಶೇರಿಂಗ್ ಆಯ್ಕೆ. ಈ ಅಕೌಂಟ್​ ಶೇರಿಂಗ್ ಹಾಗೂ ಪಾಸ್​ವರ್ಡ್​ ಶೇರಿಂಗ್ ನಿಂದ ನೆಟ್​ಪ್ಲಿಕ್ಸ್​ಗೆ ಸಾಕಷ್ಟು ಹಾನಿಯಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಇದನ್ನು ತಡೆಗಟ್ಟಲು ಕಂಪೆನಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ನೆಟ್​ಪ್ಲಿಕ್ಸ್​ ಅಕೌಂಟ್ ಹೊಂದಿರುವವರು ತಮಗೆ ಬೇಕಿನಿಸಿದಾಗ ಪಾಸ್​ವರ್ಡ್​ನ್ನು ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರೇ ಅವರೂ ಕೂಡ ನೆಟ್​ಪ್ಲಿಕ್ಸ್​ನ್ನು ಹಣ ಪಾವತಿಸದೇ ಬಳಸಬಹುದಾಗಿದೆ. ಈ ಮಾರ್ಗವನ್ನೇ ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನೆಟ್​ಪ್ಲಿಕ್ಸ್​ ಈ ಮಾರ್ಗದ ಕಡಿವಾಣಕ್ಕೆ ಮುಂದಾಗಿದೆ.

ಸದ್ಯ ಈ ಆಯ್ಕೆಯನ್ನು ತೆಗೆಯುವುದಕ್ಕಾಗಿ ಟ್ರಯಲ್ ರನ್ ನ್ನು ನೆಟ್​ಪ್ಲಿಕ್ಸ್​ ನಡೆಸುತ್ತಿದೆ. ಇದು ಯಶಸ್ವಿಯಾದರೇ ಜಾರಿಗೊಳಿಸಲು ಮುಂದಾಗಿದೆ. ಇದು ಜಾರಿಗೆ ಬಂದರೆ ಮತ್ತೊಬ್ಬರ ಪಾಸ್​ವರ್ಡ್​ ಮೂಲಕ ನೆಟ್​ಪ್ಲಿಕ್ಸ್​ ವೀಕ್ಷಿಸುವುದು ಅಸಾಧ್ಯವಾಗುತ್ತದೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net