ಮೀನು ಹುಟ್ಟಿದ್ದು ಹೇಗೆ ಗೊತ್ತಾ? ಅಬ್ಬಬ್ಬಾ.. ಮೀನಿನ ಇತಿಹಾಸ ಹೇಗಿದೆ ನೋಡಿ...

fish
Published on
ಸಮುದ್ರದಲ್ಲಿರುವ ಕೆಲವು ಜಾತಿಯ ಬ್ಯಾಕ್ಟೀರಿಯಾ ಮತ್ತು ಶೈವಲಗಳ ದ್ಯುತಿಸಂಶ್ಲೇಷಣೆಯಿಂದಾಗಿ ಸಮುದ್ರದ ನೀರಿನಲ್ಲಿ ಮತ್ತು ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ವೃದ್ಧಿಯಾಯಿತು. ಹಸಿರುಮನೆ ಪರಿಣಾಮದಿಂದ ವಾತಾವರಣದ ಹವಾಗುಣ ವ್ಯತ್ಯಾಸವಾಗಿ, ವಾಯುಭಾರದಲ್ಲಿ ಏರಿಳಿತವಾಗಿ, ಇಂದಿನಿಂದ ಅಂದಾಜು 53 ಕೋಟಿ ವರ್ಷಗಳ ಹಿಂದೆ, ನೀರಿನಲ್ಲಿ ಅಡಕವಾಗಿರುವ ಇತರ ಬ್ಯಾಕ್ಟೀರಿಯಾ, ಕಾಬೋಹೈಡ್ರೇಡ್, ಪಾಸ್ಪೇಟ್, ನೈಟ್ರೋಜನ್, ಸೂರ್ಯನ ಶಾಖ, ಎಲೆಕ್ಟ್ರಾನ್ಸ್, ಪ್ರೋಟಾನ್ಸ್, ನ್ಯೂಟ್ರಾನ್ಸ್ ಮುಂತಾದವುಗಳ ಪ್ರಕ್ರಿಯೆಯಿಂದ ಸಾಗರಗಳಲ್ಲಿ ವಿವಿಧ ರೀತಿಯ ಸಣ್ಣ ಸಣ್ಣ ಹುಳುಗಳು ಉಗಮವಾದವು. ಈ ಪ್ರಕ್ರಿಯೆಗೆ, ಸೂರ್ಯನಿಂದ ಪ್ರತಿಕ್ಷಣದಲ್ಲೂ ಹೊರ ಹೊಮ್ಮುವ ವಿದ್ಯುತ್​ಕಾಂತಿ (ಸೋಲಾರ್ ವಿಂಡ್, ಎಲೆಕ್ಟ್ರಾನ್ಸ್, ಪೊ›ಟಾನ್ಸ್), ಅಯಾನುಗೋಳ ಮತ್ತು ಭೂಮಿಯ ಆಳದಲ್ಲಿರುವ ಆಸ್ತೆನೋಸ್ಪಿಯರ್​ನ ಪ್ರಭಾವವಿದೆ.

ಅಂತಹ ಹುಳುಗಳು ಶೈವಲಗಳನ್ನು ತಿನ್ನುತ್ತಿದ್ದವು. ನಂತರ ಹಲವು ಲಕ್ಷ ವರ್ಷಗಳ ವಿಕಾಸದಲ್ಲಿ ಅವುಗಳು ಬೆಳೆದು ಉದ್ದವಾದವು. ಸ್ವಲ್ಪ ದೊಡ್ಡದಾದ ಹುಳುಗಳು ಸಣ್ಣಹುಳುಗಳನ್ನು ತಿನ್ನಲಾರಂಭಿಸಿದವು. ಆದ್ದರಿಂದ ಅವುಗಳಿಗೆ ಹೆಚ್ಚು ಪೋಷಕಾಂಶಗಳು ನೇರವಾಗಿ ದೊರೆತು ಅವುಗಳ ದೇಹದಲ್ಲಿ ಪರಿವರ್ತನೆಯಾಗಿ ಕಿವಿರುಗಳು ಮತ್ತು ರೆಕ್ಕೆಗಳು ಬೆಳೆದು ಮೀನುಗಳಾಗಿ ರೂಪಾಂತರಗೊಂಡವು.

ಮೊದಲು ಮೀನುಗಳಲ್ಲಿ ಮೂಳೆಗಳಿಲ್ಲದೆ ಕೇವಲ ಮಾಂಸಭರಿತವಾಗಿದ್ದವು. ಕಾಲಾನಂತರ ಸಮುದ್ರದ ನೀರಿನಲ್ಲಿ ಕ್ಯಾಲ್ಷಿಯಂ, ಸೋಡಿಯಂ, ಕ್ಲೋರೈಡ್ ಮತ್ತು ಇತರ ಖನಿಜಾಂಶಗಳ ಪ್ರಮಾಣ ಹೆಚ್ಚಾದ ಹಾಗೆ ಮೀನುಗಳಲ್ಲಿ ಮೂಳೆ ವೃದ್ಧಿಯಾಗಿ ಅವುಗಳ ದೇಹದಲ್ಲಿ ಬದಲಾವಣೆಯಾಗಿ ಹಲವು ಜಾತಿಗಳಾದ ಕಶೇರುಕಗಳಾದವು (ಮೂಳೆಭರಿತ, ವರ್ಟೆಬ್ರೇಟ್). ಮೊದಲು ಸಸ್ಯಾಹಾರಿಗಳಾಗಿ ಶೈವಲಗಳನ್ನು ತಿನ್ನುತ್ತಿದ್ದ ಮೀನುಗಳಲ್ಲಿ ಕೆಲಜಾತಿ ಮೀನುಗಳು ಕಾಲಾನಂತರ ಮಾಂಸಾಹಾರಿಗಳಾಗಿ ಪರಿವರ್ತನೆಯಾಗಿ ಇತರ ಮೀನುಗಳನ್ನು ತಿನ್ನಲಾರಂಬಿಸಿದವು. ಈಗಲೂ ಸಸ್ಯಾಹಾರಿ ಮೀನುಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net