More

    ಹೊಸ ಮಾರ್ಗದರ್ಶಿ ಸೂತ್ರಗಳನ್ನು ಓಟಿಟಿ ವೇದಿಕೆಗಳು ಸ್ವಾಗತಿಸಿವೆ ಎಂದ ಪ್ರಕಾಶ್ ಜಾವಡೇಕರ್

    ನವದೆಹಲಿ: ಕಳೆದ ವಾರ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಓಟಿಟಿ ವೇದಿಕೆಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಇಂದು ಓಟಿಟಿ ಕಂಪನಿಗಳ ಜೊತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಭೆ ನಡೆಸಿದರು.

    ಸಭೆ ಬಳಿಕ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಓಟಿಟಿ ವೇದಿಕೆಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿರುವುದನ್ನು ಓಟಿಟಿ ಕಂಪನಿಗಳು ಸ್ವಾಗತಿಸಿವೆ ಎಂದಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಬಗ್ಗೆ ಸಾಕಾರಾತ್ಮಕವಾಗಿದ್ದು, ಮುಂಬರುವ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡುವಲ್ಲಿ ಓಟಿಟಿ ಶ್ರಮಿಸಲಿವೆ. ಇದೇ ವೇಳೆ ನಮ್ಮ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲಿವೆ ಎಂದು ಹೇಳಿದರು.

    ಸಾಮಾಜಿಕ ಮಾಧ್ಯಮಗಳು ಇಂದಿನ ಅಗತ್ಯ. ಆದರೆ, ಅವು ನಾಗರಿಕ ಸಮಾಜದ ಘನತೆಗೆ ಹಾಗೂ ಅಸ್ತಿತ್ವಕ್ಕೆ ದಕ್ಕೆ ತರುವಂತಿರಬಾರದು ಎಂದು ಇಬ್ಬರೂ ಸಚಿವರು ಹೇಳಿದ್ದರು.

    ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗುತ್ತಿರುವುದನ್ನು ನಾವು ಕಂಡಿದ್ದೇವೆ. ಇದನ್ನು ತಡೆಗಟ್ಟಲೇಬೇಕಾಗಿದೆ. ಡಿಜಿಟಲ್ ನ್ಯೂಸ್ ಪೋರ್ಟಲ್​ಗಳೂ ಕೂಡ ಮುದ್ರಣ ಮಾಧ್ಯಮಕ್ಕೆ ಇರುವ ಮಾರ್ಗಸೂಚಿಗಳನ್ನು ಅಳವಡಿಸಿ ಕೊಳ್ಳಬೇಕಾಗುತ್ತದೆ ಎಂದು ಜಾವಡೇಕರ್ ಹೇಳಿದ್ದರು.

    ಸೋಶಿಯಲ್ ಮೀಡಿಯಾಕ್ಕೆ ಹಾಗೂ ಓಟಿಟಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಮುಖ ಮಾರ್ಗಸೂಚಿಗಳು ಇಂತಿವೆ.

    1 ಸಾಮಾಜಿಕ ಮಾಧ್ಯಮಗಳಲ್ಲಿನ ಕುಂದು ಕೊರತೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕಾಗುತ್ತದೆ. ಫೇಸ್​ಬುಕ್ ಟ್ವಿಟ್ಟರ್​ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಕಂಟೆಂಟ್​ನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವೇ ದೂರು ದಾಖಲಾದ 36 ಗಂಟೆಯ ಒಳಗೆ ತೆಗೆದುಹಾಬೇಕಾಗುತ್ತದೆ.
    2 ಬಳಕೆದಾರರ ಖಾಸಗಿ ಸಂಗತಿಗಳ ಬಗ್ಗೆ ಮಾಹಿತಿ ಹಾಕಿದ್ದರೆ ಅಥವಾ ಫೋಟೊ, ವಿಡಿಯೋ ಹಾಕಿದ್ದರೆ ಅದರಲ್ಲೂ ಮಹಿಳೆಯರ ಖಾಸಗಿತನಕ್ಕೆ ದಕ್ಕೆ ತರುವಂತ ಕಂಟೆಂಟ್ ಇದ್ದರೆ 24 ಗಂಟೆಯ ಒಳಗೆ ಅಂತಹುದನ್ನು ಡಿಲೀಟ್ ಮಾಡಬೇಕು. 15 ದಿನಗಳೊಳಗೆ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದು ಮಹಿಳೆಯರ ಘನತೆ ಎತ್ತಿ ಹಿಡಿಯುವಲ್ಲಿ ಅಗತ್ಯ
    3 ಸರ್ಕಾರ ಟೀಕೆ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ಸ್ವಾಗತಿಸುತ್ತದೆ. ಆದರೆ, ಸೋಶಿಯಲ್ ಮೀಡಿಯಾ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ವಿರುದ್ಧ ತಮ್ಮ ಕುಂದುಕೊರತೆಯನ್ನು ಎತ್ತುವ ವೇದಿಕೆಯನ್ನು ಹೊಂದುವುದು ಬಹಳ ಮುಖ್ಯ. ಹಾಗಾಗಿ ಬಳಕೆದಾರರ ಹಿತವನ್ನು ಸಂಸ್ಥೆಗಳು ರಕ್ಷಿಸಬೇಕು
    4 ನ್ಯಾಯಲಯ ಆದೇಶಿಸಿದರೇ ಸಂದೇಶದ ಮೂಲ ಅಥವಾ ಕಂಟೆಂಟ್​ನ ಮೂಲವನ್ನು ಸಾಮಾಜಿಕ ಮಾಧ್ಯಮಗಳು ಬಹಿರಂಗಪಡಿಸಬೇಕು. ಹೊಣೆಗಾರರನ್ನಾಗಿ ಮಾಡಲು ಇದನ್ನು ಮಾಡಲಾಗುತ್ತದೆ. ಒಂದೇ ವೇಳೆ ಸಂದೇಶದ ಮೂಲ ವಿದೇಶದಲ್ಲಿದ್ದರೆ, ಅದನ್ನು ಭಾರತದಲ್ಲಿ ಮೊದಲು ಮಾಡಿದವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
    5 ಸಾಮಾಜಿಕ ಮಾಧ್ಯಮಗಳು ಹಾಗೂ ಓಟಿಟಿಗಳು ಪ್ರತಿಯೊಂದು ಸಂಸ್ಥೆಗಳು ತಮ್ಮ ಬಳಿ ದೂರು ಸ್ವೀಕಾರ ಘಟಕವನ್ನು ಹೊಂದಿರಬೇಕು. ಇದಕ್ಕೆ ಒಬ್ಬ ನುರಿತ ಅಧಿಕಾರಿಯನ್ನು ನೇಮಿಸಬೇಕು. ಇವರು ಭಾರತದಲ್ಲೇ ವಾಸಿಸಬೇಕು.
    6 ಸಾಮಾಜಿಕ ಮಾಧ್ಯಮಗಳು ಹಾಗೂ ಓಟಿಟಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಿಕೊಳ್ಳಬೇಕು. ಅವರು 24 ಗಂಟೆಯ ಒಳಗೆ ದೂರುಗಳನ್ನು ಸ್ವೀಕರಿಸುವಂತಿರಬೇಕು. ಅವರು ಸರ್ಕಾರದ ಸಂಬಂಧಿಸಿದ ಪ್ರಾಧಿಕಾರಗಳ ಜೊತೆ ಸಂಪರ್ಕದಲ್ಲಿರಬೇಕು.
    7 ಈ ಕಾನೂನುಗಳು ಮುಂದಿನ ಮೂರು ತಿಂಗಳ ಒಳಗೆ ಜಾರಿಗೆ ಬರುತ್ತವೆ. ಇದಕ್ಕೆ ಎಲ್ಲ ಓಟಿಟಿ ಹಾಗೂ ಸಾಮಾಜಿಕ ಮಾಧ್ಯಮಗಳು ಸಹಕರಿಸಬೇಕು
    8 ಓಟಿಟಿಗಳು ಸ್ವಯಂ ನಿಯಂತ್ರಣದಲ್ಲಿರಬೇಕು. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಇರಬೇಕು
    9 ಓಟಿಟಿಗಳು ಕಾರ್ಯಕ್ರಮಗಳನ್ನು ವಯೋಮಿತಿಗೆ ಅನುಗುಣವಾಗಿ ಕೆಟಗರಿಗಳನ್ನು ಮಾಡಬೇಕು
    10 ಓಟಿಟಿಗಳನ್ನು ನಿಯಂತ್ರಿಸಲು ಮೂರು ಹಂತದ ಯಾಂತ್ರಿಕ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ. ಡಿಜಿಟಲ್ ಮೀಡಿಯಾಗಳನ್ನು ನೋಂದಾಯಿಸಲು ವೇದಿಕೆ ರಚಿಸಲಾಗುತ್ತಿದೆ. (ಏಜೇನ್ಸಿಸ್)

    ಓಟಿಟಿ ಮೇಲೆ ದರ್ಶನ್ ಗರಂ:​ ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ದಚ್ಚು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts