

ಮುಂಬೈ : ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ-3 ಸುತ್ತ ಇದ್ದ ಊಹಾಪೋಹಗಳಿಗೆ ಫುಲ್ಸ್ಟಾಪ್ ಬಿದ್ದಿದೆ. ಬಿಗ್ಬಾಸ್ ಒಟಿಟಿ 1 ಮತ್ತು ಬಿಗ್ಬಾಸ್ ಒಟಿಟಿ 2 ಅನ್ನು ಅನುಕ್ರಮವಾಗಿ ಕರಣ್ ಜೋಹಾರ್ ಮತ್ತು ಸಲ್ಮಾನ್ಖಾನ್ ಹೋಸ್ಟ್ ಮಾಡಿದ್ದರು. ಬಿಗ್ಬಾಸ್ OTT ಸೀಸನ್-2 ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಬ್ಲಾಕ್ ಬಸ್ಟರ್ ಸೀಸನ್ ಆಗಿತ್ತು. ಆದರೆ ಈ ಬಾರಿ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂಬುದು ಖಚಿತವಾಗಿದೆ.
ಇದನ್ನು ಓದಿ : https://www.vijayavani.net/easy-ways-to-weight-loss
ಬಜರಂಗಿ ಭಾಯಿಜಾನ್ ಬದಲಿಗೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿನ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳಲು ಬಾಲಿವುಡ್ ನಟ ಅನಿಲ್ ಕಪೂರ್ ರೆಡಿಯಾಗಿದ್ದಾರೆ. ಕಾರ್ಯಕ್ರಮವನ್ನು ಅನಿಲ್ ಕಪೂರ್ ಹೇಗೆ ಹೋಸ್ಟ್ ಮಾಡುತ್ತಾರೆ ಎಂಬುದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ OTT ಸೀಸನ್-3 ಮುಂದಿನ ತಿಂಗಳು ಜೂನ್‌ನಲ್ಲಿ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ. ಅದರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.
OTT ಸೀಸನ್-3 ಕಾರ್ಯಕ್ರಮವನ್ನು ಈ ಹಿಂದೆ ಮೇ ತಿಂಗಳಲ್ಲಿ ಸ್ಟ್ರೀಮ್ ಮಾಡಲು ನಿರ್ಧರಿಸಲಾಗಿತ್ತು, ಆದರೆ ಅದು ಒಂದು ತಿಂಗಳು ವಿಳಂಬವಾಗಿದೆ. ಈ ಶೋಗೆ ಹೋಗುವ ಹಲವು ಸ್ಪರ್ಧಿಗಳ ಹೆಸರುಗಳು ಹೊರಬರುತ್ತಿದ್ದು, ಇದರಲ್ಲಿ ರಿಯಾಜ್ ಅಲಿ, ಶಿವಂಗಿ ಜೋಶಿ, ಶಫಾಕ್ ನಾಜ್, ದಲ್ಜಿತ್ ಕೌರ್, ವೈರಲ್ ವಡಾಪಾವ್ ಹುಡುಗಿ ಚಂದ್ರಿಕಾ, ಯೂಟ್ಯೂಬರ್ ಝೈನ್ ಸೈಫಿ, ವಿಕ್ಕಿ ಜೈನ್ ಮತ್ತು ಅದ್ನಾನ್ ಶೇಖ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದುವರೆಗೂ ಯಾವದೇ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಹೇಳಲಾಗಿಲ್ಲ.