

Violence Nepal: ನೆರೆಯ ರಾಷ್ಟ್ರ ನೇಪಾಳದಲ್ಲಿ ಸರ್ಕಾರ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಪರಿಣಾಮದ ಹಿನ್ನೆಲೆ ಶುರುವಾಗ ಜನರಲ್ -ಝೆಡ್ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದಿದೆ. ಭಾರೀ ಪ್ರತಿಭಟನೆಯಲ್ಲಿ 20 ಜನರು ಬಲಿಯಾಗಿದ್ದು, ಪ್ರಧಾನಿ ಪ್ರಸಾದ್ ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕ ಇದೀಗ ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಮಂಗಳವಾರ ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ.
ಸೋಮವಾರ ಪ್ರಾರಂಭವಾದ ಪ್ರತಿಭಟನೆಗಳು ಮಂಗಳವಾರವೂ ಮುಂದುವರೆದಿದ್ದು, ಪ್ರತಿಭಟನಾಕಾರರು ಸಂಸತ್ ಭವನ, ಓಲಿ ಅವರ ಖಾಸಗಿ ನಿವಾಸ ಸೇರಿದಂತೆ ಇತರ ನೇಪಾಳಿ ಕಾಂಗ್ರೆಸ್ ನಾಯಕರ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಕಾರರು ಪಾರ್ಲಿಮೆಂಟ್ ಕಟ್ಟಕ್ಕೆ ನುಗ್ಗಿ ಬೆಂಕಿ ಇಟ್ಟಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹೊತ್ತಿ ಉರಿಯುವ ವಿಡಿಯೋಗಳು ಹರಿದಾಡುತ್ತಿವೆ.
20 ಜನರ ಸಾವಿಗೆ ಮತ್ತು 500 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿ ಪರಿಣಮಿಸಿದ ಬೃಹತ್ ಪ್ರತಿಭಟನೆಗಳ ನಂತರ ಮಂಗಳವಾರ ರಾಜೀನಾಮೆ ನೀಡಿದ ಕೆ.ಪಿ. ಶರ್ಮಾ ಓಲಿ, ಕಠ್ಮಂಡುವಿನಿಂದ ಮಿಲಿಟರಿ ಹೆಲಿಕಾಪ್ಟರ್ನಲ್ಲಿ ಹೊರಟಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ; ಆದಾಗ್ಯೂ, ಓಲಿ ಮಿಲಿಟರಿ ವಿಮಾನದ ಮೂಲಕ ರಾಜಧಾನಿಯಿಂದ ನಿರ್ಗಮಿಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ.(ಏಜೆನ್ಸೀಸ್)