ನೇಪಾಳದಲ್ಲಿ ಸರಣಿ ಭೂಕಂಪ, 6 ಮಂದಿ ಸಾವು: ಭಾರತದಲ್ಲೂ ಕಂಪಿಸಿದ ಭೂಮಿ

earthquake
Published on

ಕಠ್ಮಂಡು/ನವದೆಹಲಿ: ನೇಪಾಳದಲ್ಲಿ ಸರಣಿ ಭೂಕಂಪನ ಸಂಭವಿಸಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಭಾರತದ ನವದೆಹಲಿ, ಮಣಿಪುರ, ಉತ್ತರಖಾಂಡ್​ ಸೇರಿದಂತೆ ಕೆಲವೆಡೆ ಭೂಮಿ ಕಂಬಿಸಿದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಮಂಗಳವಾರ ರಾತ್ರಿ 9.7ರ ಸುಮಾರಿಗೆ ನೇಪಾಳದಲ್ಲಿ 5.7 ತೀವ್ರತೆಯ ಭೂಕಂಪನ ಸಂಭವಿಸಿದೆ. ತಡರಾತ್ರಿ 1.57ರ ಸುಮಾರಿಗೆ ನೇಪಾಳದ ದೋಟಿ ಜಿಲ್ಲೆಯಲ್ಲಿ 6.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಮೀ ಆಳದಲ್ಲಿದೆ. ಮಣಿಪುರದಲ್ಲೂ ಭೂಮಿ ಕಂಪಿಸಿದೆ. ಬುಧವಾರ ಬೆಳಗ್ಗೆ 6.27ರ ಸುಮಾರಿಗೆ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 5 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತಿಳಿಸಿದೆ.

ನೇಪಾಳದ ದೋಟಿ ಜಿಲ್ಲೆಯಲ್ಲಿ ಭೂಕಂಪನದಿಂದಾಗಿ ಕೆಲವು ಮನೆಗಳು ಕುಸಿದಿದ್ದು, ಹಲವರು ಗಾಯಗೊಂಡಿದ್ದಾರೆ. ಇದುವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net