ನೀಟ್​ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳ ಇ-ಮೇಲ್​ಗೇ ನೇರ ರಿಸಲ್ಟ್​

NEET
Published on

ನವದೆಹಲಿ: 2021ನೇ ಸಾಲಿನ ನೀಟ್​ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳ ಇ-ಮೇಲ್​ಗೇ ನೇರವಾಗಿ ರಿಸಲ್ಟ್​ ಕಳಿಸಲಾಗಿದೆ ಎಂಬುದು ತಿಳಿದುಬಂದಿದೆ.

ನ್ಯಾಷನಲ್​ ಟೆಸ್ಟಿಂಗ್ ಏಜೆನ್ಸಿ (ಎನ್​ಟಿಎ) ವೈದ್ಯಕೀಯ ಕೋರ್ಸ್​ ಪ್ರವೇಶಕ್ಕಾಗಿ ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಆದರೆ ಇದನ್ನು ಅದು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸದೆ ವಿದ್ಯಾರ್ಥಿಗಳ ಇ-ಮೇಲ್​ಗೆ ನೇರವಾಗಿ ಕಳಿಸಿರುವುದು ತಿಳಿದುಬಂದಿದೆ.

ಅಧಿಕೃತ ವೆಬ್​ಸೈಟ್​​ www.neet.nta.nic.in ನಲ್ಲೂ ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ ಫಲಿತಾಂಶ ತಿಳಿದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net