23ಕ್ಕೆ ನೀಟ್ ಮರುಪರೀಕ್ಷೆ ನಿಗದಿ: ಕೇಂದ್ರ ಸರ್ಕಾರ

NEET (1)
Published on

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್- ಪದವಿಪೂರ್ವ) ಹಾಜರಾದ 1563 ವಿದ್ಯಾರ್ಥಿಗಳ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು. ಅಲ್ಲದೆ ಅವರು ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗುವ ಆಯ್ಕೆ ಹೊಂದಿರಲಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಕೇಂದ್ರದ ತೀರ್ಮಾನ ಆಲಿಸಿದ ಸುಪ್ರೀಂಕೋರ್ಟ್, ನಿಗದಿಯಾದಂತೆ ಜೂನ್ 23ರಂದು ಮರು ಪರೀಕ್ಷೆಯನ್ನು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಚರ್ಚೆ, ಸಮಾಲೋಚನೆ ಬಳಿಕ ಸಮಿತಿ ಮಾಡಿರುವ ಶಿಫಾರಸುಗಳನ್ನು ನಮ್ಮ ಮುಂದಿಡಲಾಗಿದೆ. ಈ ಪ್ರಕಾರ 1563 ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಮರು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮೇ 5ರ ಅಂಕಗಳು ರದ್ದಾಗಲಿವೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ಾಥ ಮ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್​ನ ರಜಾಕಾಲದ ಪೀಠ ಹೇಳಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್​ಟಿಎ) ಕೂಡ ಮರುಪರೀಕ್ಷೆಯ ಕುರಿತ ಸೂಚನೆ ಹೊರಡಿಸಿದೆ. ಜುಲೈ 6ರಂದು ನಿಗದಿಪಡಿಸಲಾದ ಕೌನ್ಸೆಲಿಂಗ್​ಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮರುಪರೀಕ್ಷೆಯ ಫಲಿತಾಂಶಗಳು ಜೂನ್ 30ರ ಒಳಗಾಗಿ ಪ್ರಕಟವಾಗಲಿದೆ.ತ್ತು ಅಸಮರ್ಪಕವಾಗಿ ಪರೀಕ್ಷೆ ನಡೆಸಿರುವುದು, ವಂಚನೆ, ಅಕ್ರಮ ಹಾಗೂ ಮನಸೋಇಚ್ಚೆ ರೀತಿಯಲ್ಲಿ ಗ್ರೇಸ್ ಮಾರ್ಕಗಳನ್ನು ನೀಡಿದ್ದರಿಂದ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.

ಏನಾಗಿತ್ತು?: ನೀಟ್ ಪರೀಕ್ಷೆಯನ್ನು ಸುಮಾರು 24 ಲಕ್ಷ ವಿದ್ಯಾರ್ಥಿಗಳಿಗೆ ಮೇ 5ರಂದು ನಡೆಸಲಾಗಿತ್ತು ಮತ್ತು ಜೂನ್ 4ರಂದು ಫಲಿತಾಂಶ ಬಂದಿತ್ತು. 67 ಅಭ್ಯರ್ಥಿಗಳ ಅಂಕಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು ಮತ್ತು ಅವರಲ್ಲಿ ಆರು ಮಂದಿ 720 ಅಂಕಗಳನ್ನು ಗಳಿಸಿದ್ದು ಕಂಡು ಬಂದಾಗ ಸಂಶಯ ಹೆಚ್ಚಾಗಿತ್ತು. ವಿದ್ಯಾರ್ಥಿಗಳು ಹೈಕೋರ್ಟ್​ಗಳಲ್ಲಿ ಅರ್ಜಿ ಸಲ್ಲಿಸಿದ ನಂತರ, ಎನ್​ಟಿಎ ಪರೀಕ್ಷೆ ಮತ್ತು ಶೈಕ್ಷಣಿಕ ತಜ್ಞರನ್ನು ಒಳಗೊಂಡ ಕುಂದುಕೊರತೆ ಪರಿಹಾರ ಸಮಿತಿ ರಚಿಸಲಾಯಿತು. ಪರೀಕ್ಷಾ ಸಮಯದ ನಷ್ಟ ದೃಢಪಡಿಸಿದ ಸಮಿತಿ, 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿತ್ತು.

ಕಠಿಣ ಕ್ರಮದ ಎಚ್ಚರಿಕೆ ನೀಡಿದ ಪ್ರಧಾನ್: ಈ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್, ನೀಟ್ ಫಲಿತಾಂಶದ ಅವ್ಯವಸ್ಥೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸುಪ್ರೀಂಕೋರ್ಟ್ ಮುಂದೆ ತನ್ನ ನಿಲುವನ್ನು ಹೇಳಿದೆ. ಇದು 1,500 ವಿದ್ಯಾರ್ಥಿಗಳ ಕುರಿತ ವಿಚಾರ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ. ಎನ್​ಟಿಎ ಬಗ್ಗೆ ಎದ್ದಿರುವ ಪ್ರಶ್ನೆಗಳ ಬಗ್ಗೆ ಉತ್ತರಿಸಿದ ಪ್ರಧಾನ್, ಹಿಂದೆ ಸುಪ್ರೀಂಕೋರ್ಟ್ ಆದೇಶದ ಅನುಸಾರವಾಗಿಯೇ ಎನ್​ಟಿಎ ಸ್ಥಾಪನೆ ಮಾಡಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

Neet Ban

ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ಮತ್ತು ಫಿಸಿಕ್ಸ್ ವಾಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಖ್ ಪಾಂಡೆ ಮಾತನಾಡಿ, ನೀಟ್ ಅವ್ಯವಸ್ಥೆ ಎನ್​ಟಿಎ ಮೇಲಿದ್ದ ನಂಬಿಕೆಯನ್ನೇ ಹಾಳು ಮಾಡಿದೆ. ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್ ಅಂಕಗಳು ತಪ್ಪಾಗಿವೆ ಎಂದು ಸುಪ್ರೀಂಕೋರ್ಟ್​ನಲ್ಲಿ ಎನ್​ಟಎ ಒಪ್ಪಿಕೊಂಡಿದೆ. ಒಟ್ಟಾರೆ ಬೆಳವಣಿಗೆ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಉಂಟುಮಾಡಿದೆ ಎಂಬುದನ್ನೂ ಒಪ್ಪಿಕೊಂಡಿದ್ದು, ಗ್ರೇಸ್ ಅಂಕಗಳನ್ನು ತೆಗೆದುಹಾಕುವುದಾಗಿ ಎನ್​ಟಿಎ ಹೇಳಿದೆ. ಇಲ್ಲಿರುವ ಪ್ರಮುಖ ಪ್ರಶ್ನೆ ನಮಗೆ ತಿಳಿದಿಲ್ಲದ ಇತರ ವಿಷಯಗಳಲ್ಲೂ ಎನ್​ಟಿಎ ಅಧ್ವಾನ ಮಾಡಿದೆಯೇ ಎನ್ನುವುದು. ಹಾಗಾಗಿ, ಎನ್​ಟಿಎ ಜತೆ ವಿಶ್ವಾಸದ ಸಮಸ್ಯೆಯಿದೆ. ಪೇಪರ್ ಸೋರಿಕೆಯ ವಿಷಯ ಮುಕ್ತವಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪೇಪರ್ ಸೋರಿಕೆ ಆರೋಪ ಮತ್ತು ಅಕ್ರಮ ಗಳಿಂದಾಗಿ ಘಉಉಖಖಿಎ 2024ಕ್ಕೆ ಮರುಪರೀಕ್ಷೆ ನಡೆಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿ ಜೂನ್ 11ರಂದು ಸುಪ್ರೀಂಕೋರ್ಟ್ ನೊಟೀಸ್ ಜಾರಿ ಮಾಡಿತ್ತು. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಶಿಕ್ಷಣಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್ ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.

ನೀಟ್ ರದ್ದಿಗೆ ಒತ್ತಾಯ: ಗ್ರೇಸ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ಕೇಂದ್ರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್, ನೀಟ್​ನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 1,563 ವಿದ್ಯಾರ್ಥಿಗಳಲ್ಲಿ ಯಾರೂ ತಮಿಳುನಾಡಿನವರಲ್ಲ. ರಾಜಸ್ಥಾನ, ಗುಜರಾತ್, ಹರಿಯಾಣದ ವಿದ್ಯಾರ್ಥಿಗಳಿಗೆ ಮಾತ್ರ ಎನ್​ಟಿಎ ಗ್ರೇಸ್ ಅಂಕಗಳನ್ನು ನೀಡಿದೆ. ನಾವು ನ್ಯಾಯಾಲಯವನ್ನು ಸಂರ್ಪಸುವುದಿಲ್ಲ, ಆದರೆ ನೀಟ್ ವಿರೋಧಿಸುವುದನ್ನು ಮುಂದುವರಿಸುತ್ತೇವೆ ಎಂದವರು ತಿಳಿಸಿದ್ದಾರೆ

ಸಿಬಿಐ ತನಿಖೆಗೆ ಅರ್ಜಿ: ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮತ್ತು ಅವ್ಯವಹಾರದ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಪರೀಕ್ಷಾ ಅಭ್ಯರ್ಥಿಗಳು ಸುಪ್ರೀಂಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಾಮೂಹಿಕ ಪೇಪರ್ ಸೋರಿಕೆಯ ವಿಷಯದ ಹೊರತಾಗಿ, ಪರೀಕ್ಷಾ ಕೇಂದ್ರದ ದುರ್ಬಳಕೆಯ ಆರೋಪಗಳ ಬಗ್ಗೆಯೂ ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇತರೆ ರಾಜ್ಯಗಳ (ಒಡಿಶಾ, ಕರ್ನಾಟಕ, ಜಾರ್ಖಂಡ್) ವಿದ್ಯಾರ್ಥಿಗಳು ಗುಜರಾತ್​ನ ಗೋಧ್ರಾದಲ್ಲಿ ನಿರ್ದಿಷ್ಟ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಗುಜರಾತ್​ನ ಪಂಚಮಹಲ್ ಜಿಲ್ಲೆಯ ಗೋಧ್ರಾ ತಾಲೂಕಿನಲ್ಲಿ ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕದ ಕನಿಷ್ಠ 16 ವಿದ್ಯಾರ್ಥಿಗಳು ನೀಟ್​ನಲ್ಲಿ ತೇರ್ಗಡೆಯಾಗಲು ತಲಾ 10 ಲಕ್ಷ ರೂ ಪಾವತಿಸಿದ್ದಾರೆ ಮತ್ತು ಗುಜರಾತಿನ ಜೈ ಜಲರಾಮ್ ಶಾಲೆಯಲ್ಲಿದ್ದ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು 1,000 ಕಿ.ಮೀ.ಗಳಷ್ಟು ಪ್ರಯಾಣ ಮಾಡಿದ್ದಾರೆ. ಇದು ಅನುಮಾನಗಳನ್ನು ಹೆಚ್ಚಿಸಿದೆ ಎಂದು ದೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net