ಮೆಟ್ರೋನಲ್ಲಿ ಯುವತಿಯರ ಆಶ್ಲೀಲ ವರ್ತನೆ; ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

Delhi Metro
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಘಟನೆಗಳು ಒಂದಿಲ್ಲೊಂದು ಕಾರಣಕ್ಕೆ ದೇಶದ ಜನರ ಗಮನವನ್ನು ಸೆಳೆಯುತ್ತಿದೆ. ಇದೀಗ ಮೆಟ್ರೋದಲ್ಲಿ ರೀಲ್ಸ್​ಗಾಘಿ ಇಬ್ಬರು ಯುವತಿಯರು ಅಶ್ಲೀಲವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಇಬ್ಬರು ಯುವತಿಯರು ಹೋಲಿ ಹಬ್ಬಕ್ಕಾಗಿ ರೀಲ್ಸ್​ ಮಾಡುವುದನ್ನು ನೋಡಬಹುದಾಗಿದೆ. ಈ ವೇಳೆ ಪ್ರಯಾಣಿಕರ ಇದ್ದರೂ ಸಹ ಯುವತಿಯರಿಬ್ಬರು ಪರಸ್ಪರ ಬಣ್ಣ ಹಚ್ಚಿಕೊಂಡು ಬಳಿಕ ಅಶ್ಲೀಲವಾಗಿ ವರ್ತಿಸಲು ಶುರು ಮಾಡುತ್ತಾರೆ. ಇದನ್ನೂ ನೋಡುತ್ತಿರುವ ಯುವತಿಯರಿಗೆ ಏನು ಹೇಳದೆ ತಮ್ಮ ಕೆಲಸದಲ್ಲಿ ತಾವು ತೊಡಗಿರುವುದನ್ನು ನೋಡಬಹುದಾಗಿದೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ದೆಹಲಿ ಮೆಟ್ರೋ ಕಾರ್ಪೊರೇಶನ್‌ಗೆ ದೂಷಿಸುವ ಮೂಲಕ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇಂತಹ ಆಶ್ಲೀಲ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿಡಿಯೋ ನೋಡುತ್ತಿರುವ ನಮಗೆ ಇಷ್ಟು ಮುಜುಗರವಾಗುತ್ತಿದೆ. ಇನ್ನೂ ಅಲ್ಲಿರುವ ಪ್ರಯಾಣಿಕರ ಸ್ಥಿತ ಏನು ಎಂದು ನೆಟ್ಟಿಗರು ಕಮೆಂಟ್​ಗಳ ಮೂಲಕ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net