More

  ನೋಡ ನೋಡುತ್ತಿದ್ದಂತೆ ಕಾದಾಟ್ಟಕ್ಕಿಳಿದ ಆನೆಗಳು; ವಿಡಿಯೋ ವೈರಲ್

  ತಿರುವನಂತಪ್ಪುರಂ: ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಎರಡು ಆನೆಗಳು ಮೆರವಣಿಗೆಯ ಮಧ್ಯದಲ್ಲೇ ಕಾದಾಡಿರುವ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

  ವೈರಲ್​ ಆಗಿರುವ ವಿಡಿಯೋದಲ್ಲಿ ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ ಎರಡು ಆನೆಗಳನ್ನು ಅಲಂಕರಿಸಲಾಗಿದೆ. ಈ ವೇಳೆ ಆನೆಯೊಂದು ಇದ್ದಕ್ಕಿದ್ದಂತೆ ಗೀಳಿಡಲು ಶುರು ಮಾಡಿದ್ದು, ಏಕಾಏಕಿ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ನೋಡ ನೋಡುತ್ತಿದ್ದಂತೆ ಎರಡು ಆನೆಗಳು ಕಾದಾಡಲು ಶುರು ಮಾಡುತ್ತವೆ. ಇದನ್ನು ನೋಡಿದ ಜನರು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

  ಇದನ್ನೂ ಓದಿ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಸ್ಟಾರ್​ ನಟನ ದಾಂಪತ್ಯಕ್ಕೆ 40ರ ಸಂಭ್ರಮ; ಹೇಗಿತ್ತು ನೋಡಿ ಜಗ್ಗೇಶ್​-ಪರಿಮಳ ಪಾಲಿನ ಆ ವಿಶೇಷ ದಿನ

  ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗಳನ್ನು ರವಿಕೃಷ್ಣನ್​ ಹಾಗೂ ಶ್ರೀಕೃಷ್ಣನ್​ ಎಂದು ಗುರುತಿಸಲಾಗಿದ್ದು, ಎರಡು ಆನೆಗಳನ್ನು ಸೆರೆಹಿಡಿಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಎರಡು ಆನೆಗಳನ್ನು ಗುರುವಾಯೂರಿನಿಧಂ ಕರೆತರಲಾಗಿತ್ತು ಎಂದು ತಿಳಿದು ಬಂದಿದೆ.

  ಈ ವೇಳೆ ಇದನ್ನು ಗಮನಿಸಿದ ಆನೆ ದಳದ ಸದಸ್ಯರ ತಂಡವು ಕೂಡಲೇ ಕಾದಾಡುತ್ತಿರುವ ಎರಡು ಆನೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಆದರೆ, ಇದಕ್ಕೂ ಬಗ್ಗದ ಆನೆಗಳು ದೇವಾಲಯದ ಆವರಣದಿಂದ ಓಡಿ ಹೋಗುತ್ತವೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts