

New York: ಪದವಿ ಪಡೆಯಲು ಕೆಲವು ದಿನಗಳ ಮೊದಲು ಹೋಟೆಲ್ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ಭಾರತೀಯ ಮೂಲದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬಹಾಮಾಸ್‌ನಲ್ಲಿ ಭಾನುವಾರ (ಮೇ.11) ನಡೆದಿದೆ.
ಗೌರವ್ ಜೈಸಿಂಗ್ ಮ್ಯಾಸಚೂಸೆಟ್ಸ್‌ನ ವಾಲ್ಥಮ್‌ನಲ್ಲಿರುವ ಬೆಂಟ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು, ಪ್ರವಾಸಕ್ಕಾಗಿ ಬಹಾಮಾಸ್ಗೆ ಹೋದಾಗ ಈ ದುರಂತ ನಡೆದಿದೆ. ಈ ವಾರದ ಕೊನೆಯಲ್ಲಿ ಗೌರವ್ಗೆ ಪದವಿ ಸಿಗಬೇಕಿತ್ತು, ಆದರೆ ಅಷ್ಟರೊಳಗೆ ಈ ಘಟನೆ ಕುಟುಂಬಸ್ಥರನ್ನು ನೋವಿಗೆ ದೂಡಿದೆ.
ಗೌರವ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಮೇ 17 ರಂದು ನಿಗದಿಯಾಗಿರುವ ಪದವಿಪೂರ್ವ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ್ ಅವರನ್ನು ಗೌರವಿಸಲು ನಾವು ಯೋಜಿಸಿದ್ದೇವೆ" ಎಂದು X ನಲ್ಲಿ ಬೆಂಟ್ಲಿ ವಿಶ್ವವಿದ್ಯಾಲಯ ಪೋಸ್ಟ್ ಮಾಡಿದೆ.
ರಾತ್ರಿ 10 ಗಂಟೆ ಸುಮಾರಿಗೆ ಗೌರವ್ ತನ್ನ ಹೋಟೆಲ್ ಕೋಣೆಯೊಳಗೆ ಇತರ ರೂಮ್‌ಮೇಟ್‌ಗಳೊಂದಿಗೆ ಇದ್ದಾಗ ಗೌರವ್ ಆಕಸ್ಮಿಕವಾಗಿ ಮೇಲಿನ ಮಹಡಿಯ ಬಾಲ್ಕನಿಯಿಂದ ಬಿದ್ದಿದ್ದಾರೆ, ತುರ್ತು ವೈದ್ಯಕೀಯ ಸೇವೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದವು ಆದರೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)