

ನವದೆಹಲಿ: ರಾಜ್ಯಸಭೆಯ 61 ಸ್ಥಾನಗಳಿಗೆ ನೂತನ ಸದಸ್ಯರು ಆಯ್ಕೆಯಾಗುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಬಲ ಹೆಚ್ಚಾಗಿದೆ. 17 ಸದಸ್ಯರ ಆಯ್ಕೆಯೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾ ಬಲ 85ಕ್ಕೆ ಏರಿಕೆಯಾಗಿದ್ದು, 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ಒಟ್ಟು ಸಂಖ್ಯೆ 116ಕ್ಕೆ ಏರಿದೆ. ಇದರ ಜತೆಗೆ ಬಿಜೆಪಿಯೆಡೆಗೆ ಒಲವು ಹೊಂದಿರುವ ಬಿಜೆಡಿ (9 ಸ್ಥಾನ), ವೈಎಸ್ಆರ್ ಕಾಂಗ್ರೆಸ್ (6 ಸ್ಥಾನ) ಹಾಗೂ ಇನ್ನಿತರ ಸಣ್ಣ ಪಕ್ಷಗಳು ಬೆಂಬಲಿಸಿದರೆ ರಾಜ್ಯಸಭೆಯಲ್ಲಿ ಎನ್ಡಿಎ ಯಾವುದೇ ಪ್ರಮುಖ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ.
61 ಸ್ಥಾನಗಳ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್ ಸಂಖ್ಯೆ 40ಕ್ಕಿಳಿದಿದೆ. ಬಿಜೆಡಿ ಮತ್ತು ಟಿಎಂಸಿ ತಲಾ 4 ಸ್ಥಾನ, ಜೆಡಿಯು, ಎಐಎಡಿಎಂಕೆ ಮತ್ತು ಡಿಎಂಕೆ ತಲಾ 3 ಸ್ಥಾನ, ಎನ್ಸಿಪಿ, ಆರ್ಜೆಡಿ ಮತ್ತು ಟಿಆರ್ಎಸ್ ತಲಾ 2 ಸ್ಥಾನ ಹಾಗೂ ಉಳಿದ ಪಕ್ಷಗಳು 12 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಮೇಲ್ವನೆಗೆ ಆಯ್ಕೆಯಾಗಿರುವ 61 ನೂತನ ಸದಸ್ಯರಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 43 ಸಂಸದರು ಇದೇ ಮೊದಲ ಬಾರಿ ಮೇಲ್ಮನೆ ಪ್ರವೇಶಿಸಿದ್ದಾರೆ. 12 ಸಂಸದರು ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದು, ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದ 6 ಸಂಸದರು ಮತ್ತೆ ಪ್ರವೇಶ ಪಡೆದಿದ್ದಾರೆ. 20 ರಾಜ್ಯಗಳ ಒಟ್ಟು 61 ಸ್ಥಾನಗಳಲ್ಲಿ 42 ಸ್ಥಾನಗಳ ಸದಸ್ಯರು ಕಳೆದ ಮಾರ್ಚ್ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಲ್ಲಿ 28 ಸದಸ್ಯರು ಮೊದಲ ಬಾರಿ ಮೇಲ್ಮನೆ ಪ್ರವೇಶಿಸಿದವರಾಗಿದ್ದಾರೆ.
ರಾಜ್ಯಸಭೆ ಬಲಾಬಲ: