Sharad Pawar | ಸಂವಿಧಾನದಿಂದ ಭಾರತದಲ್ಲಿ ಸ್ಥಿರತೆ ನೆಲೆಸಿದೆ : ಶರದ್ ಪವಾರ್

Sharad Pawar
Published on

Sharad Pawar: ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳು ಬದಲಾವಣೆಯೊಂದಿಗೆ ಮುನ್ನಡೆಯುತ್ತಿದರು ಸಹ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತವನ್ನು ಒಗ್ಗಟ್ಟಿನಿಂದ ಇರಿಸಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಸಚಿವ ಶರದ್ ಪವಾರ್ ಹೇಳಿದ್ದಾರೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ಸಂಶೋಧನಾ ಕೇಂದ್ರದ ಉದ್ಘಾಟನೆಯ ನಂತರ ಮಾತನಾಡಿದ ಪವಾರ್​, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿನ ರಾಜಕೀಯ ಅಶಾಂತಿಯನ್ನು ಉಲ್ಲೇಖಿಸಿ ಅಂಬೇಡ್ಕರ್ ಅವರ ದೂರದೃಷ್ಟಿಯಿಂದಾಗಿ ಭಾರತದಲ್ಲಿ ಸ್ಥಿರತೆ ನೆಲೆಸಿದೆ ಎಂದರು. ಐತಿಹಾಸಿಕ ಮತ್ತು ನಿರಂತರ ಸವಾಲುಗಳ ಹೊರತಾಗಿಯೂ ದೇಶ ಒಗ್ಗಟ್ಟಿನಿಂದ ಇದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಪ್ರಮುಖ ಕಾರಣ ಎಂದರು.

ನಮ್ಮ ದೇಶದ ನಕ್ಷೆ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಏನೆಲ್ಲಾ ನಡೆಯುತ್ತಿದೆ ಎಂಬುದರ ಚಿತ್ರಣ ಸಿಗುತ್ತದೆ, ಪಾಕಿಸ್ತಾನದಲ್ಲಿನ ಅಸ್ಥಿರತೆ, ನೇಪಾಳವನ್ನು ಶಾಂತಿಪ್ರಿಯ ರಾಷ್ಟ್ರ ಮತ್ತು ಭಾರತದ ಸ್ನೇಹಿತ ಎಂದು ಕರೆಯಲಾಗುತ್ತದೆ, ಆದರೆ, ಅಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಬಾಂಗ್ಲಾದೇಶದಲ್ಲೂ ಸ್ಥಿರತೆ ಇಲ್ಲ, ಶ್ರೀಲಂಕಾದಲ್ಲಿಯೂ ಬೇರೆ ಬೇರೆ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ, ಇಷ್ಟೆಲ್ಲಾ ಇದ್ದರು ಭಾರತವು ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ಅದರ ಸಂಪೂರ್ಣ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಶ್ರೇಯಸ್ಸು ಸಲ್ಲಬೇಕು, ಈ ವಿಷಯದಲ್ಲಿ ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾಕ್ರಾ ನಂಗಲ್ ಆಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆ ನಿರ್ಮಾಣ ಸೇರಿದಂತೆ ಸಂವಿಧಾನ ರಚನೆ ಮತ್ತು ದೇಶದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಸ್ಮರಿಸಿದ ಪವಾರ್, ಈ ದೇಶವನ್ನು ನಿರ್ಮಿಸಿ, ಬಲಪಡಿಸಲು ಅಂಬೇಡ್ಕರ್ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಟೀಕೆ..

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಅಸಮಧಾನದ ವ್ಯಕ್ತಪಡಿಸಿದ ಪವಾರ್​, ಸಮಾಲೋಚನಾ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ಬದಿಗಿಡುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ ತತ್ವಗಳನ್ನು ದುರ್ಬಲಗೊಳಿಸಿದಂತೆ, ನಾನು ಸಾಕಷ್ಟು ವರ್ಷಗಳ ಕಾಲ ಸಂಸತ್ತನ್ನು ಪ್ರತಿನಿಧಿಸಿದ್ದೇನೆ, ಸದನದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿವಿಧ ವಿಷಯಗಳ ಕುರಿತು ಚರ್ಚಿಸುವುದನ್ನು ನೋಡಿದ್ದೇನೆ, ಆದರೆ, ಇಂದು ಆಡಳಿತ ನಡೆಸುವವರ ಮನೋಭಾವವನ್ನು ನೋಡಿದರೆ, ಅವರಿಗೆ ಚರ್ಚೆಯಲ್ಲಿ ನಂಬಿಕೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನ ಮೂಡುತ್ತದೆ ಎಂದರು.

ಪ್ರಸ್ತುತ ಸಂವಾದ ಮತ್ತು ಚರ್ಚೆಯ ಕೊರತೆ ಸಂಬಂಧಪಟ್ಟವರಿಂದ ಎದ್ದು ಕಾಣುತ್ತಿದ್ದು, ಸಂಸತ್ತಿಗೆ ಹೊಸ ಕಟ್ಟಡವನ್ನು ನಿರ್ಮಿಸುವ ನಿರ್ಧರ ತೆಗೆದುಕೊಳ್ಳುವಾಗಲೂ ಯಾರೊಂದಿಗೂ, ಯಾವುದೇ ರೀತಿಯ ಚರ್ಚೆ ನಡೆಸಿಲ್ಲ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net