ಆ್ಯಪ್​ ಮೂಲಕ ಪಕ್ಷ ಸೇರ್ಪಡೆಯಾಗುವವರಿಗೆ ಹೊಸ ಆಫರ್​ ನೀಡಿದ ಎನ್​ಸಿಪಿ

sharad-pawar 24 JAN 20
Published on

ಮುಂಬೈ: ರಾಜಕೀಯ ಪಕ್ಷಗಳು ತಮ್ಮತ್ತ ಬೆಂಬಲಿಗರನ್ನು ಆಕರ್ಷಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತವೆ ಮತ್ತು ಯಶಸ್ವಿಯಾಗುತ್ತವೆ.

ಇದೀಗ ಶರದ್​ ಪವಾರ್​ ನೇತೃತ್ವದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಯೂ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದೆ.

ಪಕ್ಷದ ಆ್ಯಪ್​ ಲಾಂಚ್​

ತಮ್ಮ ಪಕ್ಷದತ್ತ ಹೆಚ್ಚಿನ ಬೆಂಬಲಿಗರನ್ನು ಸೆಳೆಯಲು ಯೋಜನೆಯನ್ನು ರೂಪಿಸಿರುವ NCP ನಾಯಕರು ಹೊಸ ಅಪ್ಲಿಕೇಶನ್​ ಒಂದನ್ನು ಲಾಂಚ್​ ಮಾಡಿದ್ದಾರೆ.

ಈ ಆ್ಯಪ್​ ಡೌನ್​ಲೋಡ್​ ಮಾಡಿ ರಿಜಿಸ್ಟರ್​​ ಮಾಡುವವರಿಗೆ ಪಕ್ಷದ ಕಡೆಯಿಂದ ಉಡುಗೊರೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಅರಿವು ಮೂಡಿಸಲು ಕ್ರಮ

ಈ ಕುರಿತು ಮಾತನಾಡಿರುವ ಪಕ್ಷದ ವಕ್ತಾರರೊಬ್ಬರು ಆ್ಯಪ್​ ಲಾಂಚ್​ ಮಾಡಿರುವ ಮುಖ್ಯ ಕಾರಣ ಎಂದರೆ ಜನರಿಗೆ ನಮ್ಮ ಪಕ್ಷದ ತತ್ವ ಸಿದ್ಧಾಂತ, ನಮ್ಮ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಯೋಜನೆಗಳು ಮತ್ತು ರಾಜಕೀಯದ ಬಗ್ಗೆ ಮಾಹಿತಿ ನೀಡಲು ಈ ಅಪ್ಲಿಕೇಶನ್​ ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.

ಅಪ್ಲಿಕೇಶನ್​ ಅನ್ನು ಡೌನ್​​ಲೋಡ್​​ ಮಾಡುವವರಿಗೆ ಟೀ-ಶರ್ಟ್​​, ಬ್ಯಾಗ್​, ಛತ್ರಿ, ಕೀ ಚೈನ್​​, ಪೆನ್, ವಾಲೆಟ್​, ಕಾಫಿ ಮಗ್​, ವಾಟರ್​ ಬಾಟಲ್​​ ಹಾಗೂ ಹ್ಯಾಟ್​​ಗಳನ್ನು ನೀಡಲಾಗುವುದು ಎಂದು NCP ಪಕ್ಷದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net