More

    ಗೋಧ್ರಾ ಹತ್ಯಾಕಾಂಡ; ಪ್ರಕರಣದ 8 ಆರೋಪಿಗಳಿಗೆ ಜಾಮೀನು

    ನವದೆಹಲಿ: 2002ರ ಗೋಧ್ರಾ ರೈಲು ಸುಟ್ಟ ಪ್ರಕರಣದ 8 ಆರೋಪಿಗಳಿಗೆ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ಇತರೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ.

    17ವರ್ಷ ಸೆರೆವಾಸ

    ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರಿದ್ದ ಪೀಠವು ಆರೋಪಿಗಳು ಕಳೆದ 17 ವರ್ಷಗಳಿಂದ ಸೆರೆವಾಸ ಅನುಭವಿಸಿರುವ ಕಾರಣ ಜಾಮೀನು ಮಂಜೂರು ಮಾಡಿದೆ.

    ಇದನ್ನೂ ಓದಿ: ಗ್ಯಾಸ್​ ಸ್ಟೇಷನ್​ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ; ಆರೋಪಿ ಫೋಟೋ ಬಿಡುಗಡೆ

    ವಿಚಾರಣಾ ನ್ಯಾಯಲಯದಿಂದ ಮರಣದಂಡನೆಗೆ ಒಳಗಾದ ಅಪರಾಧಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ಸೋಮವಾ ವಜಾ ಮಾಡಿತ್ತು. ಆದರೆ, ಗುಜರಾತ್​ ಹೈ ಕೋರ್ಟ್​ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.

    ಗಂಭೀರ ಅಪರಾಧ

    ಗುಜರಾತ್​ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಆರೋಫಿಗಳು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ರೈಲಿನ ಬೋಗಿಗಳ ಬಾಗಿಲನ್ನು ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದರು ಎಂದು ವಾದ ಮಂಡಿಸಿದ್ದರು.

    ಆರೋಪಿಗಳ ಪರ ವಕೀಲರು ಈಗಾಗಲೇ ತಮ್ಮ ಕ್ಷಕಿದಾರರು 17 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದು ಇದನ್ನು ಪರರಗಣಿಸಿ ಅವರಿಗೆ ಜಾಮೀನು ಮಂಜುರು ಮಾಡಬೇಕು ಎಂದು ನ್ಯಾಯಪೀಠಕ್ಕೆ ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts