ಗ್ಯಾಸ್​ ಸ್ಟೇಷನ್​ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ; ಆರೋಪಿ ಫೋಟೋ ಬಿಡುಗಡೆ

Saiesh veera
Published on

ಕೊಲಂಬಸ್​: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಒಹಿಒನಲ್ಲಿ ನಡೆದಿದೆ.

ಸಾಯೇಶ್​ ವೀರ(24) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಯುವಕ ಕೆಲಸ ಮಾಡುತ್ತಿದ್ದ ಗ್ಯಾಸ್​​​ ಬಂಕನಲ್ಲಿ ಈ ಘಟನೆ ನಡೆದಿದೆ.

ಗುಂಡಿಕ್ಕಿ ಹತ್ಯೆ

ಯುವಕ ಸಾಯೇಶ್​ ಉನ್ನತ ವ್ಯಾಸಂಗದ ಜೊತೆಗೆ ಗ್ಯಾಸ್​​​ ಸ್ಟೇಷನ್​ನಲ್ಲಿ​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿದ್ದರು. ಈ ವೇಳೆ ಬಂಕ್​ಗೆ ಬಂದ ಆರೋಪಿಯೂ ಏಕಾಏಕಿ ಯುವಕನ ಮೇಲೆ ಗುಂಡಿನ ದಾಳಿ ಮಾಡಿದ್ಧಾನೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ಸಿಬ್ಬಂದಿ ಹಾಗೂ ವೈದ್ಯರು ಸಾಯೇಶ್​ನನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಯುವಕ ಮೃತಪಟ್ಟಿದಾನೆಂದು ವೈದ್ಯರು ಗೋಷಿಸಿದ್ದಾರೆ.

ದುರದೃಷ್ಟಕರ

ಯುವಕ ಸ್ನಾತಕೋತರ ಪದವಿ ವ್ಯಾಸಂಗ ಮಾಡಲು ಎಚ್​ 1ಬಿ ವೀಸಾ ಅಡಿಯಲ್ಲಿ ಆಯ್ಕೆಯಾಗಿದ್ದನ್ನು. ತುಂಬಾ ಕನಸುಗಳೊಂದಿಗೆ ಇಲ್ಲಿಗೆ ಬಂದಿದ್ದನ್ನು ಮತ್ತು ಈತ ಉತ್ತಮ ಕ್ರಿಕೆಟ್​ ಆಟಗಾರ.

ಎರಡು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟ ನಂತರ ಕುಟುಂಬವನ್ನು ಪೋಷಿಸುವ ಸಲುವಾಗಿ ಆತ ಅಮೆರಿಕಾಗೆ ಬಂದಿದ್ದ. ಆದರೆ, ವಿಧಿ ಆಟವೇ ಬೇರೆಯೇ ಇತ್ತು ಎಂದು ರೋಹಿತ್​ ಯಲಮಂಚಿಲಿ ಎಂಬವವರು ಪ್ರತಿಕ್ರಿಯಿಸಿದ್ದಾರೆ.

ಆರೋಪಿ ಫೋಟೋ ಬಿಡುಗಡೆ

ಇನ್ನು ಸಾಯೇಶ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಫೋಟೋವಮನ್ನು ಪೊಲೀಸರು ಬಿಡಗಡೆ ಮಾಡಿದ್ಧಾರೆ. ಸದ್ಯ ತನಿಖೆ ಕೈಗೊಂಡಿರುವ ಪೊಲೀಸರು ಶೀಘ್ರದಲ್ಲೇ ಆರೋಫಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net