ಅವಳಿ ಮಕ್ಕಳಿಗೆ ತಾಯಿಯಾದ ನಯನತಾರ; ಟ್ವಿಟರ್​​ನಲ್ಲಿ ಸಂಭ್ರಮ ಹಂಚಿಕೊಂಡ ಪತಿ ವಿಘ್ನೇಶ್​

564521
Published on

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ತಾಯಿಯಾಗಿರುವ ಖುಷಿಯ ವಿಚಾರವನ್ನು ನಯನತಾರ ಪತಿ ವಿಘ್ನೇಶ್​ ಶಿವನ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ನಯನತಾರ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಯನತಾರ-ವಿಘ್ನೇಶ್ ಶಿವನ್ ದಂಪತಿಗಳಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬರುತ್ತಿವೆ. ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಅವಳಿ ಮಕ್ಕಳ ಫೋಟೋ ಶೇರ್ ತಮ್ಮ ಮನೆಯ ಹೊಸ ಸದಸ್ಯರನ್ನು ಸ್ವಾಗತಿಸಿದ್ದಾರೆ.

ಏಳು ವರ್ಷಗಳ ಡೇಟಿಂಗ್​ ನಂತರ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ವಿವಾಹವಾಗಿದ್ದರು. ಇದೀಗ ಈ ದಂಪತಿ ತಂದೆ-ತಾಯಿಯಾದ ಸಂಭ್ರಮದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net