ಕುಂಚದ ಸಹಾಯವಿಲ್ಲದೆ ಮೂಡಿದ ಹನುಮಂತನ ಚಿತ್ರ

123
Published on

ನವ ದೆಹಲಿ: ಅನೇಕ ಜನರು ತಮ್ಮಲ್ಲಿರುವ ವಿಶೇಷವಾದ ಕಲೆಯನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹಲವು ಮಂದಿ ಅದ್ಭುತವಾಗಿ ಚಿತ್ರ ಕಲಾಕಾರರಿದ್ದಾರೆ. ಚಿತ್ರಕಲೆಯಲ್ಲೂ ಹಲವಾರು ಪ್ರಕಾರಗಳಿವೆ. ಒಂದೊಂದು ಪ್ರಕಾರವೂ ವಿಭಿನ್ನವಾದುದು.

ಚಿತ್ರಕಲಾವಿದರು ಬ್ರಶ್, ಇದ್ದಿಲು, ನೂಲಿನ ಸಹಾಯದಿಂದ ವಾವ್ ಎನಿಸುವಂತಹ ಚಿತ್ರ ಬಿಡಿಸುವುದನ್ನು ನೋಡಿದ್ದೇವೆ. ಇದೀಗ ಇಲ್ಲೊಬ್ಬ ಕಲಾವಿದೆ ಯಾವುದೇ ಪರಿಕರಗಳ ಸಹಾಯವಿಲ್ಲದೆ ತನ್ನ ಎರಡೂ ಕೈಗಳಿಗೆ ಬಣ್ಣ ಹಚ್ಚಿಕೊಂಡು ಅದ್ಭುತವಾಗಿ ಹನುಮಂತನ ಚಿತ್ರ ಬಿಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಕಲಾವಿದ ಚಮತ್ಕಾರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಲಾವಿದ ಹನುಮಂತನ ಚಿತ್ರ ಬಿಡಿಸಿದ್ದಾರೆ. ಕಲಾವಿದ ತನ್ನ ಎರಡೂ ಕೈಗಳನ್ನೇ ಬ್ರಶ್​ಗಳಾಗಿ ಬಳಸಿಕೊಂಡಿರುವುದು ವಿಶೇಷ. ಯಾವುದೇ ಪೈಟಿಂಗ್ ಬ್ರಶ್​​ಗಳ ಸಹಾಯವಿಲ್ಲದೆ ಚಿತ್ರ ಬಿಡಿಸಿರುವುದು ವಿಶೇಷ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅತ್ಯಂತ ಕಡಿಮೆ ಸಮಯದಲ್ಲಿ 1.5 ಲಕ್ಷಕ್ಕಿಂತಲೂ ಅಧಿಕ ಜನರು ಕಲಾವಿದನ ಚಮಾತ್ಕಾರವನ್ನು ವೀಕ್ಷಿಸಿದ್ದಾರೆ. ಜತೆಗೆ ಹನುಮಂತ ಆಶೀರ್ವಾದ ನಿಮ್ಮ ಮೇಲಿದೆ. ಹೀಗಾಗಿ ಇಂತಹ ಅದ್ಭುತ ಚಿತ್ರ ನಿಮ್ಮಿಂದ ಮೂಡಿ ಬರಲು ಸಾಧ್ಯವಾಯಿತು ಎಂದು ಅನೇಕ ಜನರು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net