

ಛತ್ತೀಸಗಢ: ಮಾವೊವಾದಿಗಳು(ನಕ್ಸಲರು) ಶರಣಾಗಿ ಮುಖ್ಯವಾಹಿನಿಗೆ ಬನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಕರೆ ನೀಡಿದರು.
ಇಲ್ಲಿನ ರಾಯಪೂರ ಪೊಲೀಸ್ ಮೈದಾನ ಕವಾಯುತು ಮೈದಾನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಬಸ್ತರ್ ಒಲಂಪಿಕ್' ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದರು.
''ನಾನು ನಿಮ್ಮ ಬಳಿ ಮನವಿ ಮಾಡುವೆ, ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ, ನಿಮಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮದು. 2026ರ ಮಾರ್ಚ್ ಹೊತ್ತಿಗೆ ನಕ್ಸಲಿಸಂ ಪೀಡುಗು ನಿರ್ಮೂಲನೆ ಮಾಡುವುದು ಕೇಂದ್ರ ಮತ್ತು ಇಲ್ಲಿ ರಾಜ್ಯ ಸರ್ಕಾರ ಗುರಿ ಹೊಂದಿದೆ. ಹೀಗಾಗಿ, ನಿಮ್ಮ ಒಳ್ಳೆಯು ಭವಿಷ್ಯ ಮುಂದಿದೆ. ಎಲ್ಲರೂ ಮುಖ್ಯವಾಹಿನಿ ಬನ್ನಿ ಎಂದ ಅವರು, ಮನವಿಗೆ ಕಿವಿಗೊಡದಿದ್ದರೇ ಭದ್ರತಾ ಪಡೆಗಳು ಕ್ರಮಗೊಳ್ಳಲಿವೆ'' ಎಂದು ಶಾ ಎಚ್ಚರಿಕೆ ನೀಡಿದರು.
ನಿಮಗಿಂತ ಮತ್ತು ನಿಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ನಾನು ಇಂದು ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿದ್ದೇನೆ, ಏಕೆಂದರೆ ನಿಮ್ಮನ್ನು ಶರಣಾಗತಿ ಮತ್ತು ಮುಖ್ಯವಾಹಿನಿಗೆ ಸೇರುವಂತೆ ಮನವರಿಕೆ ಮಾಡುವ ನಮ್ಮ ಶ್ರಮದಾಯಕ ಪ್ರಯತ್ನಗಳು ಫಲ ನೀಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ನಕ್ಸಲರ ಗುಂಪಿಗೆ ತಿಳಿಸಿದರು.
ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಅಸ್ಸಾಂನ ಆರು ರಾಜ್ಯಗಳಿಗೆ ಸೇರಿದ ಸುಮಾರು 30 ಶರಣಾದ ನಕ್ಸಲರು ಮತ್ತು ಬಂಡುಕೋರರು ಇಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮವು ಚಿಕ್ಕದಾಗಿರಬಹುದು ಆದರೆ ಬಹಳ ಮಹತ್ವದ್ದಾಗಿದೆ. ಹಿಂಸೆ ಮತ್ತು ಶರಣಾಗತಿಯ ನಿರರ್ಥಕತೆಯನ್ನು ಅರಿತು ದೇಶದ ಯುವಕರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂಬುದಕ್ಕೆ ನನಗೆ ಅಪಾರ ತೃಪ್ತಿ ಸಿಗುತ್ತಿದೆ ಎಂದರು,(ಏಜೆನ್ಸೀಸ್).