

ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು 2012ರಲ್ಲಿ ಪ್ರಧಾನಿ ಮಾಡಬೇಕಿತ್ತು ಎಂದು ಕಾಂಗ್ರೆಸ್(Congress) ಹಿರಿಯ ಮುಖಂಡ ಮತ್ತು ಮಾಜಿ ವಿದೇಶಾಂಗ ಸಚಿವ ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಭಾನುವಾರ ಮಾತನಾಡಿದ್ದಾರೆ.
''2012ರಲ್ಲಿ ಪ್ರಣಬ್ ಮುಖರ್ಜಿಯನ್ನು ರಾಷ್ಟ್ರಪತಿಯಾಗಿ ನೇಮಿಸಿದಾಗ ರಾಜಕೀಯ ಪರಿಸ್ಥಿತಿಯನ್ನು ನೆನಪು ಮಾಡಿಕೊಂಡ ಆಯ್ಯರ್, ಜಗ್ಗರ್ನಾಟ್ ಪ್ರಕಟಿಸಿರುವ ತನ್ನ ಮುಂಬರುವ ಪುಸ್ತಕ 'ಎ ಮೆವರಿಕ್ ಇನ್ ಪಾಲಿಟಿಕ್ಸ್' ಪುಸ್ತಕದಲ್ಲಿ ವಿಚಾರಗಳನ್ನು ಮುಂದುಟ್ಟಿದ್ದಾರೆ''.
''ನೀವು ಬೇಕಾದರೆ ನೋಡಿ 2012ರಲ್ಲಿ ಎರಡು ಪರಿಸ್ಥಿತಿಗಳನ್ನು ಅನುಭವಿಸಿದ್ದೇವೆ. ಹೌದು, ಸೋನಿಯಾ ಗಾಂಧಿ ಅವರು ತುಂಬಾ ಅನಾರೋಗಕ್ಕೆ ತುತ್ತಾಗಿದ್ದರು. ಅಲ್ಲದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೂಡ 6 ಬೈಪಾಸ್ ಸರ್ಜರಿ ನಡೆದ್ದಿದ್ದವು. ಅಂದಿನ ಪರಿಸ್ಥಿತಿಯಲ್ಲಿ ಪಕ್ಷದ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಸೇರಿದಂತೆ ಎಲ್ಲಾರು ವಿಶೇಷಚೇತನರಂತೆ ಭಾಸವಾಗಿತ್ತು. ಆದರೆ, ಈ ಎಲ್ಲರ ನಡುವೆ ಪ್ರಣಬ್ ಮುಖರ್ಜಿ ಮಾತ್ರ ಒಳ್ಳೆಯ ಶಕ್ತಿ, ಆಲೋಚನೆ ಮತ್ತು ನಿರ್ದಿಷ್ಟ ಪ್ರಮಾಣದ ವರ್ಚಸ್ಸು ಅನ್ನು ಹೊಂದಿದ್ದರು. ಅಂದಿನ ಪರಿಸ್ಥಿಯಲ್ಲಿ ಪಕ್ಷವನ್ನು ಮತ್ತು ಸರ್ಕಾರವನ್ನು ನಡೆಸಬಲ್ಲ ತಾಕತ್ತು ಪ್ರಣಬ್ ಅವರಿಗೆ ಇತ್ತು'' ಎಂದು ಅಯ್ಯರ್ ಹೇಳಿದ್ದಾರೆ.
"ಇದು ಈಗ ಮುಗಿತ ಕಥೆ ಆದರೆ, ಡಾ.ಮನಮೋಹನ್ ಸಿಂಗ್ ರಾಷ್ಟ್ರಪತಿಯಾಗಿದ್ದರೆ ಮತ್ತು ಪ್ರಣಬ್ ಪ್ರಧಾನಿಯಾಗಿದ್ದರೆ, ನಾವು 2014 ರಲ್ಲಿ (ಲೋಕಸಭಾ ಚುನಾವಣೆಯಲ್ಲಿ) ಸೋಲುತ್ತಿದ್ದೆವು. ಆದರೆ, ಇಂತಹ ಭಾರಿ ಅವಮಾನಕರ ಸೋಲು ಅನುಭವಿಸುತ್ತಿರಲಿಲ್ಲ'' ಎಂದು ಅಯ್ಯರ್ ಹೇಳಿದ್ದಾರೆ.(ಏಜೆನ್ಸಿಸ್).