ನೀವು ** ಭಾರತೀಯರು: ಇಟಲಿ ಪ್ರವಾಸದಲ್ಲಿದ್ದ ಭಾರತೀಯ ಯುವತಿಯರಿಗೆ ಅವಮಾನ; ಬಾಂಗ್ಲಾ ಮೂಲದ ವೇಟರ್​ ಹುಸೇನ್​ ವಿಡಿಯೋ ವೈರಲ್​! Bangladesh Waiter Viral Video

ಭಾರತದ ಬಗ್ಗೆ ಅವ್ಯಾಚ್ಯ ಪದ ಬಳಸಿದ ವೇಟರ್ ಹುಸೇನ್
ಭಾರತದ ಬಗ್ಗೆ ಅವ್ಯಾಚ್ಯ ಪದ ಬಳಸಿದ ವೇಟರ್ ಹುಸೇನ್
Published on

ಪ್ರಮುಖ ಮುಖ್ಯಾಂಶಗಳು

  • ಇಟಲಿ ಪ್ರವಾಸದಲ್ಲಿದ್ದ ಭಾರತೀಯ ಯುವತಿಯರ ಜೊತೆ ಬಾಂಗ್ಲಾ ಮೂಲದ ವೇಟರ್ ಹುಸೇನ್ ಉದ್ಧಟತನ
  • ಭಾರತದ ಬಗ್ಗೆ ಅವ್ಯಾಚ್ಯ ಪದ ಬಳಸಿದ ವೇಟರ್ ಹುಸೇನ್
  • ಇಟಲಿ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗರಿಗೆ ಅವಮಾನ!
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಇಟಲಿ: ಭಾರತದ ಪ್ರವಾಸಿಗರೊಬ್ಬರು ಇಟಲಿಗೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ, ಹೊಟೇಲ್​ವೊಂದರಲ್ಲಿ ಬಾಂಗ್ಲಾದೇಶ ವೇಟರ್​​ವೊಬ್ಬ ಭಾರತದ ಬಗ್ಗೆ ಅವ್ಯಾಚ್ಯ ಪದಗಳನ್ನು ಬಳಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ (Bangladesh Waiter Viral Video) ಆಗುತ್ತಿದೆ.
ಸೋಷಿಯಲ್​ ಮೀಡಿಯಾ ಇನ್ಫ್ಲ್ಯೂಎನ್ಸರ್, ಖುಷಿ ದುಬೆ ಎಂಬಾಕೆ ತಮ್ಮ ಸ್ನೇಹಿತರ ಜೊತೆ ಇಟಲಿ ಪ್ರವಾಸದಲ್ಲಿದ್ದಾಗ, ಈ ಘಟನೆಗೆ ನಡೆದಿದೆ. ವೇಟರ್​ ಭಾರತದ ಬಗ್ಗೆ ನಾಲಿಗೆ ಹರಿಬಿಟ್ಟಿರುವ ವಿಡಿಯೋವನ್ನು ಖುಷಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಊಟದ ಬಿಲ್ಲಿಂಗ್​ ಸಂಬಂಧಿಸಿ ತಕರಾರು ಶುರುವಾಗಿದೆ. ವಿಡಿಯೋನಲ್ಲಿರುವ ವೇಟರ್​​ನ್ನು ಬಾಂಗ್ಲಾ ಮೂಲದ ಹುಸೇನ್​ ಎಂದು ಗುರುತಿಸಲಾಗಿದೆ.
ವೇಟರ್​ ಹುಸೇನ್​, ಅವ್ಯಾಚ್ಯ ಪದಗಳನ್ನು ಮೊದಲು ಅಲ್ಲಿದ್ದ ಮಹಿಳೆಯ ಮೇಲೆ ಪ್ರಯೋಗಿಸಿದ್ದಾನೆ. ನಾನು ಪೊಲೀಸ್​ರನ್ನು ಕರೆಯುತ್ತೆನೆಂದು ಧಮಕಿ ಹಾಕಿದ್ದಾನೆ. ನಂತರ ಅಲ್ಲಿದ್ದ ಯುವತಿಯರು, ನೀವು ಹೀಗೆ ಅವ್ಯಾಚ್ಯ ಪದಗಳನ್ನು ಉಪಯೋಗಿಸುವುದು ಸರಿಯಲ್ಲ ಎಂದಿದ್ದಾರೆ. ಆಗ ನೀವು ಎಲ್ಲಿ ಹೋದರೂ ನಿಮ್ಮ ದೇಶದ ಮರ್ಯಾದೆ ಕಳೆಯುತ್ತಿರಿ ಎಂದಿದ್ದಾನೆ.
ಆಗ ಯುವತಿಯರು ಹೌದೇ, ನಾನು ಬಾಂಗ್ಲಾದೇಶದವರು ಎಂದು ತಿರುಗೇಟು ನೀಡಿದಾಗ, ಇಲ್ಲ ನೀವು, ಆ ಹಾಳಾದ ಭಾರತ ದೇಶದವರು ಎಂದು ಹೇಳಿ ಭಾರತದ ವಿರುದ್ಧ ಅಸಭ್ಯ ಭಾಷಾ ಪ್ರಯೋಗ ಮಾಡಿದ್ದಾನೆ. ಆಗ ಸಿಟ್ಟಿಗೆದ್ದ ಯುವತಿಯರು, ಹತ್ತಿರದಲ್ಲಿದ್ದ ಇಟಲಿ ಪೊಲೀಸರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಭಾರತದ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಹೇಳಿರುವುದು ವಿಡಿಯೋನಲ್ಲಿ ದಾಖಲಾಗಿದೆ.

ರೊಚ್ಚಿಗೆದ್ದ ನೆಟ್ಟಿಗರು!

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಭಾರತೀಯರು ವೇಟರ್​ ಮೇಲೆ ಕೆಂಡಕಾರುತ್ತಿದ್ದಾರೆ. ಈ ಬಾಂಗ್ಲಾದೇಶಕ್ಕೆ ಜನ್ಮ ಕೊಟ್ಟಿದ್ದೆ ಭಾರತ ಈಗ ತನ್ನ ಅಪ್ಪನ ವಿರುದ್ಧವೇ ನಾಲಿಗೆ ಹರಿ ಬಿಡುವಷ್ಟು ಸೊಕ್ಕು ಬಂದಿದೆ ನೋಡಿ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.
ನಮ್ಮ ಭಾರತೀಯ ನಾರಿಯರು ಅವನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಇಂತಹ ನೀಚ ವ್ಯಕ್ತಿಗಳನ್ನು ಹೊಟೇಲ್​ನಲ್ಲಿ ಇಟ್ಟುಕೊಂಡರೆ, ಆದಷ್ಟು ಬೇಗ ಹೊಟೇಲ್​ ಮುಚ್ಚಬೇಕಾಗುತ್ತದೆ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net