ಮಧ್ಯಪ್ರದೇಶದಲ್ಲಿ 'ಏಕರೂಪ ನಾಗರಿಕ ಸಂಹಿತೆ' ಅಂಗೀಕಾರ: ನಮಗೆ ಹಿಂದೂ-ಮುಸ್ಲಿಂ ಇಬ್ಬರೂ ಒಂದೇ, ಓಟ್ ಬ್ಯಾಂಕ್ ಅಲ್ಲ; ಸಿಎಂ ಮೋಹನ್​ ಯಾದವ್​! UCC Bill passed in Madhya Pradesh

ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!
ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!
  • ದೇಶದಲ್ಲಿ UCC ಜಾರಿಗೊಳಿಸಿದ 4ನೇ ರಾಜ್ಯ ಎನಿಸಿಕೊಂಡ ಮಧ್ಯಪ್ರದೇಶ
  • ಕಾಂಗ್ರೆಸ್ ವಿರೋಧದ ನಡುವೆಯೂ ಸಿಎಂ ಮೋಹನ್ ಯಾದವ್ ಬಿಗ್ ಸ್ಟೇಟ್‌ಮೆಂಟ್
ಮಧ್ಯಪ್ರದೇಶ: ಮಂಗಳವಾರ (ಜು.21) ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಜಾರಿ ಮಾಡುವ ಮೂಲಕ, ಮಧ್ಯಪ್ರದೇಶ ರಾಜ್ಯವು ಈ ಯುಸಿಸಿ (UCC Bill passed in Madhya Pradesh) ಅನ್ನು ಜಾರಿಗೆ ತಂದ ನಾಲ್ಕನೇ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮಧ್ಯಪ್ರದೇಶಕ್ಕಿಂತ ಮೊದಲು, ಉತ್ತರಾಖಂಡ, ಅಸ್ಸಾಂ ಹಾಗೂ ಗುಜರಾತ್​ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸಿವೆ.

ನಮಗೆ ಹಿಂದೂ-ಮುಸ್ಲಿಮರು ಇಬ್ಬರೂ ಒಂದೇ!

ಏಕರೂಪ ನಾಗರಿಕ ಮಸೂದೆ ಅಂಗೀಕಾರವಾದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಸಿಎಂ ಮೋಹನ್​ ಯಾದವ್​​, ಇಂದು ನಮ್ಮ ರಾಜ್ಯದಲ್ಲಿ ಏಕರೂಪ ನಾಗರಿಕ ಮಸೂದೆ ಅಂಗೀಕಾರವಾಗಿದೆ. ನಾವು ಕಾಂಗ್ರೆಸ್ ಅವರಂತೆ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಕೇವಲ ಓಟ್​ ಬ್ಯಾಂಕ್​ ರೀತಿ ನೋಡುವುದಿಲ್ಲಿ. ನಮಗೆ ಇಬ್ಬರು ಒಂದೇ ಎಂದು ಯಾದವ್​ ತಿಳಿಸಿದ್ದಾರೆ.
ಅವರು ಹೀಗೆ ಕೇವಲ ಒಂದು ಧರ್ಮಸ ಏಲೈಕೆ ಮಾಡಿದ ಕಾರಣಕ್ಕಾಗಿಯೇ ಇಂದು ಶೇ. 80 ಭಾರತದಿಂದ ಕಾಂಗ್ರೆಸ್​ ಮುಕ್ತವಾಗಿದೆ, ಅವರು ಮಾಡಿದ ಪಾಪಕ್ಕೆ ಜನ ಉತ್ತರ ನೀಡಿದ್ದಾರೆಂದು ಹೇಳಿದ್ದಾರೆ.

ಕಾಂಗ್ರೆಸ್​ನಿಂದ ವಿರೋಧ!

ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಆರಂಭವಾಗಿರುವ ಮಳಗಾಲದ ಅಧಿವೇಶನದಲ್ಲಿ ಈ ಏಕರೂಪ ನಾಗರಿಕ ಮಸೂದೆಯನ್ನು ಅಂಗೀಕಾರ ಮಾಡುವುದಾಗಿ ಬಿಜೆಪಿ ತಿಳಿಸಿತ್ತು. ಇಂದು ನಡೆದ ಅಧಿವೇಶನದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್​ ಅಧಿವೇಶನವನ್ನು ಅರ್ಧ ಗಂಟೆ ಮುಂದೂಡುವಂತೆ ಮಾಡಿತು.
ಕಾಂಗ್ರೆಸ್​ ನಾಯಕ ನರೇಂದ್ರ ಸಿಂಗ್​ ತೋಮರ್​, ಸಿಎಂ ಮೋಹನ್​ ಯಾದವ್​ ಮೇಲೆ ಕೇಳಿ ಬಂದಿರುವ ಭೂ ಅಕ್ರಮದ ಬಗ್ಗೆ ಪ್ರಶ್ನಿಸಿದರು. ಆದರೆ ಬಿಜೆಪಿ ಇದೆಲ್ಲಾ ರಾಜಕೀಯ ಪಿತೂರಿ ಎಂದು ಆರೋಪಗಳನ್ನು ತಳ್ಳಿಹಾಕಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net