ದೆಹಲಿಯಲ್ಲಿ ಮುಂದುವರಿದ ಪ್ರತಿಭಟನೆ: ಅಭಿಜಿತ್​ ದೀಪ್ಕೆ, ನೇತೃತ್ವದಲ್ಲಿ ಹೋರಾಟ ಪುನರಾರಂಭ; ಜಂತರ್​-ಮಂತರ್​ನಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್! Jantar Mantar Protest

ಅಭಿಜಿತ್ ದೀಪ್ಕೆ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ!
ಅಭಿಜಿತ್ ದೀಪ್ಕೆ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ!
Published on

ಪ್ರಮುಖ ಮುಖ್ಯಾಂಶಗಳು

  • NEET ಪರೀಕ್ಷಾ ಅಕ್ರಮ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಪುನರಾರಂಭ
  • ಅಭಿಜಿತ್ ದೀಪ್ಕೆ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ!
  • ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆದಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಕಾಕ್ರೋಚ್​ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್​​-ಮಂತರ್ (Jantar Mantar Protest) ​ನಿಂದ ಸಂಸತ್​ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಆಯೋಜನೆ ಮಾಡಿತ್ತು.
ಈ ಪ್ರತಿಭಟನೆಯನ್ನು ಗಮನಿಸಿದ ಕೇಂದ್ರ ಸರ್ಕಾರವು ಸಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿತು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಸಂವಾದ ನಡೆಸಿದ ಕಾಕ್ರೋಚ್​ ವಕ್ತಾರರು, ತಮ್ಮ ಬೇಡಿಕೆಗಳನ್ನು ಸಚಿವರ ಬಳಿ ತಿಳಿಸಿದ್ದಾರೆ.
ನಿನ್ನೆ ನಡೆದ ಪ್ರತಿಭಟನಾ ರ‍್ಯಾಲಿ ನಂತರ ಇಂದು (ಮಂಗಳವಾರ, ಜು.21) ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ, ಆಶುತೋಷ್​ ರಾಂಕಾ ನೇತೃತ್ವದಲ್ಲಿ ಮತ್ತೆ ಹೋರಾಟ ಪ್ರಾರಂಭವಾಗಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆಂದ ತಿಳಿದು ಬಂದಿದೆ.

ಮತ್ತೊಮ್ಮೆ ಹೋರಾಟ!

ಸೋಮವಾರ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಅನೇಕ ಕಡೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನಲೆ ಇಂದು ಅಭಿಜಿತ್​ ದೀಪ್ಕೆ ಮತ್ತು ಆಶುತೋಷ್​ ರಾಂಕಾ ಜಂತರ್​ ಮಂತರ್​ ನಲ್ಲಿ ಕುಳಿತುಕೊಂಡು ಹೋರಾಟವನ್ನು ಮುಂದುವರಿಸಿದ್ದಾರೆ.
ಬೆಳಿಗ್ಗೆ ದೆಹಲಿಯಲ್ಲಿ ಮಳೆ ಬಂದ ಕಾರಣ ಜನರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯೇ ಇತ್ತು ಎಂದು ಹೇಳಲಾಗುತ್ತಿದ್ದು, ಈಗ ಮತ್ತೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​​!

ನಿನ್ನೆ ನಡೆದ ಹೋರಾಟದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನಲೆ, ಪೊಲೀಸರು ಲಾಠಿ ಚಾರ್ಜ್​ ಹಾಗೂ ಅಶ್ರುವಾಯು ಪ್ರಯೋಗವನ್ನು ಮಾಡಲಾಗಿತ್ತು. ಕೆಲ ಕಡೆ ಪ್ರತಿಭಟನಾಕಾರರು ಕೂಡ ಪೊಲೀಸ್​ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಇಂದು ಜಂತರ್​ ಮಂತರ್​ ಸುತ್ತಮುತ್ತ ಬಿಗಿ ಪೊಲೀಸ್​ ವ್ಯವಸ್ಥೆಯನ್ನು ನಿಯೋಜನೆ ಮಾಡಲಾಗಿದೆ.

ವಾಂಗ್​ಚುಕ್​ ಆರೋಗ್ಯ ಸ್ಥಿತಿ ಮಾಹಿತಿ ಕೇಳಿದ ಹೈಕೋರ್ಟ್​

ಈ ಹೋರಾಟವನ್ನು ಬೆಂಬಲಿಸಿ, ಪರಿಸರವಾದಿ ಸೋನಮ್​ ವಾಂಗ್​ಚುಕ್​ ಕಳೆದ 23 ದಿನಗಳಿಂದ ಉಪವಾಸ ನಡೆಸುತ್ತಿದ್ದು, ಪ್ರಸ್ತುತ ಅವರು ಸಫ್ದರ್​ಜಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಹೇಗಿದೆ? ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ? ಎಂದು ಆಸ್ಪತ್ರೆ ಸಿಬ್ಬಂದಿ ನ್ಯಾಯಪೀಠಕ್ಕೆ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್​ ಆದೇಶಿಸಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net