ದಳಪತಿ ಡಿವೋರ್ಸ್​ ಪ್ರಕರಣ: ನಟಿಯೊಟ್ಟಿಗೆ ಅನೈತಿಕ ಸಂಬಂಧ ಆರೋಪ; ಅಗಸ್ಟ್​​ 7 ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ! Thalapathy Vijay Divorce

ಪ್ರಕರಣದ ವಿಚಾರಣೆ ಆಗಸ್ಟ್ 7ಕ್ಕೆ ಮುಂದೂಡಿಕೆ
ಪ್ರಕರಣದ ವಿಚಾರಣೆ ಆಗಸ್ಟ್ 7ಕ್ಕೆ ಮುಂದೂಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಹಾಗೂ ಸಂಗೀತಾ 25 ವರ್ಷಗಳ ದಾಂಪತ್ಯ ಅಂತ್ಯ?
  • ನಟಿಯೊಟ್ಟಿಗೆ ಅನೈತಿಕ ಸಂಬಂಧದ ಆರೋಪ ಹೊರಿಸಿದ ಸಂಗೀತಾ
  • ಪ್ರಕರಣದ ವಿಚಾರಣೆಯನ್ನು ಕೌಟುಂಬಿಕ ನ್ಯಾಯಾಲಯ ಆಗಸ್ಟ್ 7ಕ್ಕೆ ಮುಂದೂಡಿಕೆ
ಡಿವೋರ್ಸ್​: ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್​ ಜೊತೆ ವಿಚ್ಛೇದನ (Thalapathy Vijay Divorce) ಕೋರಿ ಪತ್ನಿ ಸಂಗೀತಾ​ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯ ವಿಚಾರಣೆಯನ್ನು ಅಗಸ್ಟ್​ 7 ಕ್ಕೆ ಮುಂದೂಡಿದೆ.
ತನ್ನ ಪತಿ ವಿಜಯ್​ ಬೇರೊಂದು ಹೆಣ್ಣಿನ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಆರೋಪಿಸಿ, ಸಂಗೀತಾ ಫೆಬ್ರುವರಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಸಂಗೀತಾಳ ಅರ್ಜಿಯಲ್ಲೇನಿದೆ?

ಏಪ್ರಿಲ್​ 20 ರಂದು ನಡೆದ ಮೊದಲ ಅರ್ಜಿ ವಿಚಾರಣೆಗೆ ವಿಜಯ್​ಮತ್ತು ಸಂಗೀತಾ ಇಬ್ಬರೂ ಹಾಜರಾಗದ ಕಾರಣ ಪ್ರಕರಣದ ವಿಚಾರಣೆಯನ್ನು ಜೂನ್​ 15 ಕ್ಕೆ ನಿಗಧಿ ಮಾಡಲಾಗಿತ್ತು.
ಸಂಗೀತಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತನ್ನ ಪತಿ ವಿಜಯ್​ಗೆ ಸಿನಿಮಾ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧವಿದೆ. ಇದು 2021 ರಲ್ಲಿ ನನ್ನ ಗಮನಕ್ಕೆ ಬಂದಿದೆ. ಹಾಗೆಯೇ ವಿಜಯ್​ ನನ್ನ ಜೊತೆಗಿನ ವೈವಾಹಿಕ ಸಂಬಂಧವನ್ನು ಕೊನೆಮಾಡುವುದಾಗಿ ಹಲವು ಬಾರಿ ಹೇಳಿದ್ದಾರೆ ಎಂದು ನಮೂದಿಸಲಾಗಿದೆ.

ನಟಿ ಜೊತೆ ಸುತ್ತಾಟ!

ನಟಿ ಜೊತೆ ಸಂಬಂಧವಿರುವ ಸಂಗತಿ ಮನೆಯಲ್ಲಿ ಗೊತ್ತಾದ ಮೇಲು ಅದನ್ನು ನಿಲ್ಲಿಸದ ವಿಜಯ್​ ಆ ನಟಿಯೊಟ್ಟಿಗೆ ಪ್ರವಾಸ ಮತ್ತು ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಜೊತೆಯಲ್ಲಿ ಹೋಗಿದ್ದಾನೆಂದು ಸಂಗೀತಾ ಆರೋಪಿಸಿದ್ದಾಳೆ.
ಹೀಗೆ ಬೇರೊಂದು ಹೆಣ್ಣಿನ ಜೊತೆ ನನ್ನ ಪತಿ ಸುತ್ತಾಡುವುದರಿಂದ ನನಗೆ ಮಾನಸಿಕವಾಗಿ ತೀವ್ರ ಹಿಂಸೆ ಉಂಟಾಗಿದೆ. ಅಷ್ಟೇ ಅಲ್ಲದೆ ನನ್ನ ಇಬ್ಬರು ಮಕ್ಕಳಾದ ಜೇಸನ್​ ಸಂಜಯ್​ ಮತ್ತು ದಿವ್ಯಾ ಸಾಶಾ ಇವರಿಗೆ ಅನೇಕ ಸ್ಥಳಗಳಲ್ಲಿ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.

25 ವರ್ಷಗಳ ದಾಂಪತ್ಯದಲ್ಲಿ ಬಿರುಕು

ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪವಾಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಅಗಸ್ಟ್​ 7 ರಂದು ನಡೆಯಲಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net