ಏತನ್ಮಧ್ಯೆ ಹೆಚ್ಚಿನ ಸ್ಥಾನಗಳ ಬೇಡಿಕೆ ಮತ್ತು ಅಧಿಕಾರ ಹಂಚಿಕೆ ಬಗ್ಗೆ ಬೇಡಿಕೆ ಇಟ್ಟವರಲ್ಲಿ ಪ್ರಮುಖರಾಗಿರುವ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್, ಇಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಪಕ್ಷವು ನಮ್ಮೆಲ್ಲರಿಗಿಂತಲೂ ದೊಡ್ಡದು. ಪಕ್ಷದ ನಾಯಕತ್ವ ಏನೇ ತೀರ್ಮಾನ ಮಾಡಿದ್ರೂ, ನಾವು ಅದನ್ನು ಸ್ವೀಕರಿಸುತ್ತೇವೆ. ಯಾಕಂದರೆ ಏಕತೆಯೇ ನಮ್ಮ ದೊಡ್ಡ ಶಕ್ತಿ ಎಂದು ಬರೆದುಕೊಂಡಿದ್ದಾರೆ.