ದಾರುಣ ಘಟನೆ; ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಐವರು ಬಾಲಕಿಯರು ಸೇರಿ 6 ಮಕ್ಕಳು ಸಾವು | children death

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಗ್ರಾಮವೊಂದರಲ್ಲಿ ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಐವರು ಬಾಲಕಿಯರು ಸೇರಿ ಆರು ಮಕ್ಕಳು ಮುಳುಗಿ ಮೃತಪಟ್ಟಿರುವ(children death) ಘಟನೆ ಬುಧವಾರ(ಮಾ. 04) ವರದಿಯಾಗಿದೆ. 
ಪೂರ್ವ ಚಂಪಾರಣ್ ಜಿಲ್ಲೆಯ ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ದೀಕ್ಷಾ ಕುಮಾರಿ(12), ಆರಾಯಾಧ್ಯ ಕುಮಾರಿ(11), ಚೋಟಿ ಕುಮಾರಿ(8), ಸೋನಾಕ್ಷಿ ಕುಮಾರಿ(9), ಪ್ರಿಯಾ ಕುಮಾರಿ(7) ಹಾಗೂ ಪ್ರಿನ್ಸ್ ಕುಮಾರ್(11) ಎಂದು ಗುರುತಿಸಲಾಗಿದೆ.
ಈ ಕುರಿತು ಮಾತನಾಡಿರುವ ಕೇಸರಿಯಾ ಠಾಣೆಯ ಹೌಸ್ ಅಧಿಕಾರಿ ರಾಹುಲ್ ಕುಮಾರ್, ಸ್ನಾನ ಮಾಡಲು ಓರ್ವ ಬಾಲಕಿ ಮೊದಲು ಹೊಂಡಕ್ಕೆ ಇಳಿದು ಮುಳುಗಿದಾಗ, ಆಕೆಯನ್ನು ಕಾಪಾಡಲು ಉಳಿದ ಬಾಲಕಿಯರು ಸಹ ನೀರಿ ಹಾರಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net